Wednesday, August 10, 2022

Latest Posts

8 ಗಂಟೆ ತಡವಾಗಿ ಆಗಮಿಸಿದ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್: ಪರದಾಡಿದ ರೋಗಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ,ಬೀದರ್:

ಬೀದರನ ಜಿಲ್ಲಾ ಆಸ್ಪತ್ರೆ ಬ್ರೀಮ್ಸ್ ಗೆ ಬಳ್ಳಾರಿಯಿಂದ ಹೊರಟ ಲಿಕ್ವಿಡ್ ಆಕ್ಸಿಜನ್ ಸೋಮವಾರ ಬೆಳಿಗ್ಗೆ 5 ಗಂಟೆಗೆ ಬರಬೇಕಿತ್ತು ಆದರೆ ದಾರಿ ಮಧ್ಯೆ ಟ್ಯಾಂಕರ್ ಕೆಟ್ಟುನಿಂತ ಕಾರಣ ಮಧ್ಯಾಹ್ನ 1 ಗಂಟೆಗೆ ಬ್ರೀಮ್ಸ್ ತಲುಪಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟ 400 ಜನ ರೋಗಿಗಳಿಗೆ ಆಕ್ಸಿಜನ್ ಹಾಗೂ 75 ಜನ ರೋಗಿಗಳಿಗೆ ವೆಂಟಿಲೇಟರ್ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ., ಆಕ್ಸಿಜನ್ ಬರುವಲ್ಲಿ ಕ್ಷಣ ತಡವಾದರೂ ಸೊಂಕಿತ ರೋಗಿಗಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು, ಆಕ್ಸಿಜನ್ ಗಾಗಿ ಕಾಯುತ್ತ ಕುಳಿತಿದ್ದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಮುಖದಲ್ಲಿ ಮನೆ ಮಾಡಿದ್ದ ಆತಂಕ ಆಕ್ಸಿಜನ್ ಕಂಡೊಡನೆ ಬ್ರಿಮ್ಸ್ ನಿರ್ದೇಶಕ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಾಳರಾದರು.
ಸಮಯ ಪ್ರಜ್ಞೆ ಯಿಂದ ತಪ್ಪಿದ ಭಾರಿ ದುರಂತ:
ಬ್ರಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಸೋಂಕಿತರಿಗೆ ಆಕ್ಸಿಜನ್ ಮೇಲೆ ಚಿಕಿತ್ಸೆ, 75 ಸೋಂಕಿತರಿಗೆ ವೆಂಟಿಲೇಟರ್ ಮೇಲೆ ಚಿಕಿತ್ಸೆ, ಆಕ್ಸಿಜನ್ ಹೊತ್ತು ಬರುತ್ತಿದ್ದ ವಾಹನಕ್ಕೆ ದಾರಿ ಮಧ್ಯೆ ಅಡೆತಡೆ ತಪ್ಪಿಸಲು ಜಿರೋ ಟ್ರಾಫಿಕ್ ಆದ್ಯತೆ ಕೊಡುವಂತೆ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ, ಆಕ್ಸಿಜನ್ ಟ್ಯಾಂಕರ್ ಹಾದಿಯಲ್ಲಿ ಬರುವ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು, ಆದಕಾರಣ ಟ್ಯಾಂಕರ್ ಯಾವುದೇ ಅಡೆತಡೆ ಇಲ್ಲದೇ ಬ್ರೀಮ್ಸ್ ತಲುಪಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss