ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ದಿನದಂದು ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರದಂದು ಮದ್ಯ ಮಾರಾಟ ಇರುವುದಿಲ್ಲ. ಮದ್ಯ ಮಾರಾಟಕ್ಕೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲವಾದರೂ ʻಛತ್ʼ ಪೂಜೆಯಿಂದಾಗಿ ದೆಹಲಿಯಲ್ಲಿ ಮದ್ಯ ಮಾರಾಟ ಇರುವುದಿಲ್ಲ ಎಂದು ಅಬಕಾರಿ ಆಯುಕ್ತ ಕೃಷ್ಣ ಬಹಿರಂಗಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಅಧಿಕೃತ ಆದೇಶ ಹೊರಸಿದ್ದು, ಛತ್ ಪೂಜೆ ಹಬ್ಬದ ನಿಮಿತ್ತ ದೆಹಲಿಯಲ್ಲಿ ಭಾನುವಾರ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಕಾಲ ಈ ಆಚರಣೆ ನಡೆಯಲಿದೆ.
ವಿಶ್ವಕಪ್ ಫೈನಲ್ ದಿನವೇ ದೆಹಲಿಯಲ್ಲಿ ಬಾರ್‌ಗಳು ಬಂದ್ ಆಗಿರುವುದು ಮದ್ಯ ಪ್ರಿಯರಿಗೆ ನಿರಾಸೆ ಉಂಟುಮಾಡಿದೆ. ಫೈನಲ್‌ನಲ್ಲಿ ಭಾರತ ಗೆದ್ದರೆ ಪಾರ್ಟಿ ಮಾಡುವ ಕನಸು ಕಂಡಿದ್ದವರ ಆಸೆಗೆ ತಣ್ಣೀರೆರೆಚಿದಂತಾಗಿದೆ.