Thursday, July 7, 2022

Latest Posts

HORROR MOVIES ಅಂದ್ರೆ ಇಷ್ಟಾನಾ? ಇಲ್ಲಿದೆ ಇತ್ತೀಚಿನ ಟಾಪ್ 7 ಹಾರರ್ ಸಿನಿಮಾಗಳ ಲಿಸ್ಟ್!

ಬರೀ ಕತ್ತಲಲ್ಲೇ ಸಿನಿಮಾ ಆರಂಭ, ಕಿಟಕಿಯ ಕಿರ್‌ಕಿರ್ ಶಬ್ಧ, ಈ ಮಧ್ಯೆ ಅಲ್ಲೆಲ್ಲೋ ಬಿರುಗಾಳಿ ರೀತಿಯ ತಂಗಾಳಿ. ಆತ್ಮಗಳಿರುವ ಮನೆ..
ಇದೇನಪ್ಪ ಬರೀ ದೆವ್ವದ ಸಿನಿಮಾ ರೀತಿ ಯಾವುದೇ ಕಥೆ ಹೇಳ್ತಿದ್ದಾರೆ ಅನ್ಕೊಂಡ್ರಾ? ಹೌದು, ಹಾರರ್ ಮೂವಿಗಳನ್ನು ನೋಡೋಕೆ ಹೆದರೋ ನೂರು ಜನದ ಮಧ್ಯೆ ಕತ್ತಲಲ್ಲಿ ಒಬ್ಬರೇ ಕೂತು ದೆವ್ವದ ಸಿನಿಮಾ ನೋಡೋರೂ ಇದ್ದಾರೆ. ಹಾರರ್ ಸಿನಿಮಾ ಪ್ರಿಯರಿಗಾಗಿ ಟಾಪ್ 7 ದೆವ್ವದ ಮೂವಿಗಳ ಲಿಸ್ಟ್ ಇಲ್ಲಿದೆ..

ಕಾಲಿ ಕುಹಿ: ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸಿಗಲಿದೆ. ಹಳೇ ಜನ್ಮದ ಕೆಟ್ಟ ಕೆಲಸಗಳು ಈ ಜನ್ಮದಲ್ಲಿ ಹೇಗೆ ಆತ್ಮವಾಗಿ ಕಾಡುತ್ತದೆ ಅನ್ನೋದು ಈ ಸಿನಿಮಾ ತಿರುಳು.

Watch: kaali khuhi full movie review and rating - Extra Moviesಹಿಸ್ ಹೌಸ್: ಈ ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಮನೆಯೊಂದರಲ್ಲಿ ನಡೆಯುವ ಚಟುವಟಿಕೆಗಳು ಜೀವ ಝಲ್ಲೆನಿಸುವಂತೆ ಮಾಡುತ್ತದೆ.

Understanding 'The Haunting Of Hill House' ದ ಡೇ ಆಫ್ ದ ಲಾರ್ಡ್: ಈ ಸಿನಿಮಾದಲ್ಲಿ ಜೈಲುವಾಸ ಮುಗಿಸಿ ಬಂದ ಪ್ರೀಸ್ಟ್ ಒಬ್ಬನು ಮುಂದೆ ಏನೇನು ಮಾಡುತ್ತಾನೆ.. ಯಾರ ಮೇಲೆ ದ್ವೇಷ ಸಾಧಿಸುತ್ತಾನೆ ಎನ್ನುವ ಕಥೆ ಇದೆ..

The Day of the Lord' Netflix Review: Stream It or Skip It?ಪ್ಯಾರಾನಾರ್ಮಲ್: ಈ ಚಿತ್ರ ಕೂಡ ೨೦೨೦ರಲ್ಲಿ ರಿಲೀಸ್ ಆಗಿದ್ದು, ಸೈನ್ಸ್ ಹಾಗೂ ಪ್ಯಾರಾನಾರ್ಮಲ್ ಆಕ್ಟಿವಿಟಿಗಳ ಮಿಶ್ರಣ ಇದಾಗಿದೆ. ಚೇರ್ ತುದಿಯಲ್ಲಿ ಕುಳಿತು ಸಿನಿಮಾ ನೋಡುವಷ್ಟು ಕುತೂಹಲ ಇದರಲ್ಲಿದೆ.

Paranormal 4' is no more than a ghost of first filmsದುರ್ಗಾಮತಿ: ಈ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸಿಗಲಿದೆ. ಆಫೀಸರ್ ಒಬ್ಬರನ್ನು ದೊಡ್ಡ ಮನೆಯೊಳಗೆ ಲಾಕ್ ಮಾಡುತ್ತಾರೆ. ಆ ಜಾಗದಲ್ಲಿ ಯಾವುದೋ ಆತ್ಮ ಅವರೊಳಗೆ ಹೊಕ್ಕಿ ಏನೆಲ್ಲಾ ಮಾಡುತ್ತದೆ ಅನ್ನೋದು ಸಿನಿಮಾದ ತಿರುಳು..

Bhumi Pednekar looks fierce in Durgamati The Myth trailer - Movies Newsಡೋಂಟ್ ಲಿಸನ್: ಈ ಸಿನಿಮಾದಲ್ಲಿ ಗಂಡ ಹೆಂಡತಿ ಹೊಸ ಮನೆಯೊಂದಕ್ಕೆ ಶಿಫ್ಟ್ ಆಗುತ್ತಾರೆ. ಆಕಸ್ಮಿಕವಾಗಿ ಮಗನ ಸಾವಾಗುತ್ತದೆ. ಇದಾದ ನಂತರ ಮಗನ ಧ್ವನಿಯಲ್ಲಿ ಕರೆಗಳು ಬರುತ್ತದೆ.. ಯಾಕೆ ಬರುತ್ತದೆ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕಿದೆ.

Don't Listen Movie Streaming Online Watch on Netflix on Netflix ಲೈವ್ ಟೆಲಿಕಾಸ್ಟ್: ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಲಭ್ಯವಾಗಲಿದೆ. ಈ ಸಿನಿಮಾದಲ್ಲಿ ರಿಯಾಲಿಟಿ ಶೋ ಒಂದರ ಸಕ್ಸಸ್‌ಗಾಗಿ ಸುಳ್ಳು ಭೂತ ದೆವ್ವ ಎನ್ನಲಾಗುತ್ತದೆ. ಆದರೆ ಕಡೆಗೆ ಅವರು ನಿಜವಾದ ನೆಗೆಟಿವ್‌ಎನರ್ಜಿಯನ್ನು ಫೇಸ್ ಮಾಡಬೇಕಾಗುತ್ತದೆ..

Live Telecast Full Web Series Leaked On Tamilblasters For Free Download In  HD Quality | Live Telecast Full Web Series Download In Tamil From  Tamilrockers - Filmibeat

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss