2023ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನ ಮತ್ತು ದಿನಾಂಕಗಳ ಪಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2023 ಬಂದಾಯ್ತು.. ಈ ವರ್ಷದ ಕ್ಯಾಲೆಂಡರ್ ನಲ್ಲಿ ಯಾವ ದಿನಾಂಕಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳಿವೆ ಎಂಬ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಗಮನಕ್ಕೆ ತರುವ ಮಾಹಿತಿಯಾಗಿದೆ. ಹಾಗಾಗಿ ನಾವಿಲ್ಲಿ ವರ್ಷದ 12 ತಿಂಗಳಲ್ಲಿ ಬರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನ ಮತ್ತು ದಿನಾಂಕಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ ಓದಿ ತಿಳಿಯಿರಿ.

ಜನವರಿ 2023ರ ಪ್ರಮುಖ ದಿನಗಳು :

ಜನವರಿ 4 : ಅಂತರಾಷ್ಟ್ರೀಯ ವಿಶ್ವ ಬ್ರೈಲ್ ದಿನ
ಜನವರಿ 6 : ವಿಶ್ವ ಸಮರ ಅನಾಥರ ದಿನ, ರಾಷ್ಟ್ರೀಯ ತಂತ್ರಜ್ಞಾನ ದಿನ
ಜನವರಿ 9 : ಪ್ರವಾಸಿ ಭಾರತೀಯ ದಿವಸ್
ಜನವರಿ 10 : ವಿಶ್ವ ಹಿಂದಿ ದಿನ
ಜನವರಿ 11:ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ
ಜನವರಿ 12 : ರಾಷ್ಟ್ರೀಯ ಯುವ ದಿನ (ಭಾರತ)
ಜನವರಿ 15 : ಮಕರ ಸಂಕ್ರಾಂತಿ, ಸೇನಾ ದಿನ, ವಿಕಿಪೀಡಿಯಾ ದಿನ
ಜನವರಿ 17 : ವಿಶ್ವ ಧರ್ಮ ದಿನ
ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಜನವರಿ 25 : ರಾಷ್ಟ್ರೀಯ ಮತದಾರರ ದಿನ, ರಾಷ್ಟ್ರೀಯ ಪ್ರವಾಸೋದ್ಯಮ ದಿನ
ಜನವರಿ 26 : ಗಣರಾಜ್ಯೋತ್ಸವ, ಅಂತರಾಷ್ಟ್ರೀಯ ಕಸ್ಟಮ್ಸ್ ದಿನ
ಜನವರಿ 27 : ಕುಟುಂಬ ಸಾಕ್ಷರತಾ ದಿನ, ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ (ಅಂತರರಾಷ್ಟ್ರೀಯ ಸ್ಮರಣಾರ್ಥ ದಿನ)
ಜನವರಿ 28 : ಲಾಲಾ ಲಜಪತ್ ರಾಯ್ ಅವರ ಜನ್ಮದಿನ
ಜನವರಿ 30 : ಮಹಾತ್ಮ ಗಾಂಧಿಯವರ ಹುತಾತ್ಮ ದಿನ (ಹುತಾತ್ಮರ ದಿನ), ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ

ಫೆಬ್ರವರಿ 2023ರ ಪ್ರಮುಖ ದಿನಗಳು :

ಫೆಬ್ರವರಿ 2 : ವಿಶ್ವ ತೇವಭೂಮಿ ದಿನ
ಫೆಬ್ರವರಿ 4 : ವಿಶ್ವ ಕ್ಯಾನ್ಸರ್ ದಿನ
ಫೆಬ್ರುವರಿ 6 : ಸ್ತ್ರೀ ಜನನಾಂಗ ಊನಗೊಳಿಸುವಿಕೆಗೆ ಶೂನ್ಯ ಸಹಿಷ್ಣುತೆಯ ಅಂತರರಾಷ್ಟ್ರೀಯ ದಿನ
ಫೆಬ್ರವರಿ 9 : ಸುರಕ್ಷಿತ ಇಂಟರ್ನೆಟ್ ದಿನ
ಫೆಬ್ರವರಿ 10 : ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
ಫೆಬ್ರವರಿ 11 : ವಿಜ್ಞಾನದಲ್ಲಿ ಮಹಿಳಾ ಮತ್ತು ಬಾಲಕಿಯರ ಅಂತರರಾಷ್ಟ್ರೀಯ ದಿನ
ಫೆಬ್ರವರಿ 13 : ವಿಶ್ವ ರೇಡಿಯೋ ದಿನ (UNESCO), ರಾಷ್ಟ್ರೀಯ ಮಹಿಳಾ ದಿನ
ಫೆಬ್ರವರಿ 20 : ವಿಶ್ವ ಸಾಮಾಜಿಕ ನ್ಯಾಯ ದಿನ
ಫೆಬ್ರವರಿ 21 :ಅಂತರಾಷ್ಟ್ರೀಯ ಮಾತೃಭಾಷಾ ದಿನ
ಫೆಬ್ರವರಿ 24 : ಕೇಂದ್ರ ಅಬಕಾರಿ ದಿನ
ಫೆಬ್ರವರಿ 27 : ವಿಶ್ವ ಎನ್‌ಜಿಒ ದಿನ
ಫೆಬ್ರವರಿ 28 : ರಾಷ್ಟ್ರೀಯ ವಿಜ್ಞಾನ ದಿನ (ಭಾರತ)

ಮಾರ್ಚ್ 2023ರ ಪ್ರಮುಖ ದಿನಗಳು‌ :

ಮಾರ್ಚ್ 1 : ಶೂನ್ಯ ತಾರತಮ್ಯ ದಿನ, ವಿಶ್ವ ನಾಗರಿಕ ರಕ್ಷಣಾ ದಿನ
ಮಾರ್ಚ್ 3 : ವಿಶ್ವ ವನ್ಯಜೀವಿ ದಿನ
ಮಾರ್ಚ್ 4 : ಲೈಂಗಿಕ ಶೋಷಣೆಯ ವಿರುದ್ಧ ಹೋರಾಟದ ವಿಶ್ವ ದಿನ
ರಾಷ್ಟ್ರೀಯ ಭದ್ರತಾ ದಿನ
ಮಾರ್ಚ್ 8 : ಅಂತರರಾಷ್ಟ್ರೀಯ ಮಹಿಳಾ ದಿನ
ಮಾರ್ಚ್ 11 : ವಿಶ್ವ ಕಿಡ್ನಿ ದಿನ
ಮಾರ್ಚ್ 14 : ನದಿಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಯೆಯ ದಿನ
ಮಾರ್ಚ್ 15 : ವಿಶ್ವ ಗ್ರಾಹಕ ಹಕ್ಕುಗಳ ದಿನ
ಮಾರ್ಚ್ 16 : ರಾಷ್ಟ್ರೀಯ ಲಸಿಕೆ ದಿನ
ಮಾರ್ಚ್ 18 : ಆರ್ಡಿನೆನ್ಸ್ ಫ್ಯಾಕ್ಟರಿ ದಿನ
ಮಾರ್ಚ್ 20 : ವಿಶ್ವ ಗುಬ್ಬಚ್ಚಿ ದಿನ, ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್
ಮಾರ್ಚ್ 21 : ವಿಶ್ವ ಅರಣ್ಯ ದಿನ; ವಿಶ್ವ ಡೌನ್ ಸಿಂಡ್ರೋಮ್ ದಿನ; ವಿಶ್ವ ಕಾವ್ಯ ದಿನ
ಮಾರ್ಚ್ 22 : ವಿಶ್ವ ನೀರಿಗಾಗಿ ದಿನ
ಮಾರ್ಚ್ 23 : ವಿಶ್ವ ಹವಾಮಾನ ದಿನ
ಮಾರ್ಚ್ 24 : ವಿಶ್ವ ಕ್ಷಯರೋಗ ದಿನ
ಮಾರ್ಚ್ 27 :ವಿಶ್ವ ರಂಗಭೂಮಿ ದಿನ

ಏಪ್ರಿಲ್ 2023ರ ಪ್ರಮುಖ ದಿನಗಳು‌ :

ಏಪ್ರಿಲ್ 2 ‌: ವಿಶ್ವ ಆಟಿಸಂ ಜಾಗೃತಿ ದಿನ
ಏಪ್ರಿಲ್ 4 : ಅಂತರಾಷ್ಟ್ರೀಯ ಗಣಿ ಜಾಗೃತಿ ದಿನ
ಏಪ್ರಿಲ್ 5 : ರಾಷ್ಟ್ರೀಯ ಕಡಲ ದಿನ
ಏಪ್ರಿಲ್ 7 : ವಿಶ್ವ ಆರೋಗ್ಯ ದಿನ
ಏಪ್ರಿಲ್ 10 : ವಿಶ್ವ ಹೋಮಿಯೋಪತಿ ದಿನ
ಏಪ್ರಿಲ್ 11 : ರಾಷ್ಟ್ರೀಯ ಸಾಕುಪ್ರಾಣಿಗಳ ದಿನ, ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
ಏಪ್ರಿಲ್ 13 – ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
ಏಪ್ರಿಲ್ 14 : ಸಾಂಸ್ಕೃತಿಕ ಏಕತಾ ದಿನ (ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ನೇಪಾಳದಿಂದ ಗುರುತಿಸಲ್ಪಟ್ಟಿದೆ)
ಏಪ್ರಿಲ್ 15 : ವಿಶ್ವ ಕಲಾ ದಿನ
ಏಪ್ರಿಲ್ 17 : ವಿಶ್ವ ಹಿಮೋಫಿಲಿಯಾ ದಿನ
ಏಪ್ರಿಲ್ 18 : ವಿಶ್ವ ಪರಂಪರೆಯ ದಿನ
ಏಪ್ರಿಲ್ 21 : ರಾಷ್ಟ್ರೀಯ ನಾಗರಿಕ ಸೇವೆಗಳ ದಿನ, ರಾಷ್ಟ್ರೀಯ ಆಡಳಿತ ವೃತ್ತಿಪರರ ದಿನ
ಏಪ್ರಿಲ್ 22 : ಭೂಮಿಯ ದಿನ
ಏಪ್ರಿಲ್ 23 : ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ
ಏಪ್ರಿಲ್ 24 : ರಾಷ್ಟ್ರೀಯ ಪಂಚಾಯತ್ ರಾಜ್ ದಿನ
ಏಪ್ರಿಲ್ 25 : ವಿಶ್ವ ಮಲೇರಿಯಾ ದಿನ
ಏಪ್ರಿಲ್ 26 : ವಿಶ್ವ ಬೌದ್ಧಿಕ ಆಸ್ತಿ ದಿನ
ಏಪ್ರಿಲ್ 28 : ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ
ಏಪ್ರಿಲ್ 29 : ಅಂತರಾಷ್ಟ್ರೀಯ ನೃತ್ಯ ದಿನ
ಏಪ್ರಿಲ್ 30 : ಆಯುಷ್ಮಾನ್ ಭಾರತ್ ದಿವಸ್

ಮೇ 2023ರ ಪ್ರಮುಖ ದಿನಗಳು‌ :

ಮೇ 1 : ಅಂತರರಾಷ್ಟ್ರೀಯ ಕಾರ್ಮಿಕ ದಿನ
ಮೇ 2 :ಅಂತರಾಷ್ಟ್ರೀಯ ಖಗೋಳ ದಿನ
ಮೇ 4 : ವಿಶ್ವ ಅಸ್ತಮಾ ದಿನ
ಮೇ 7 : ವಿಶ್ವ ಅಥ್ಲೆಟಿಕ್ಸ್ ದಿನ, ರವೀಂದ್ರನಾಥ್ ಟ್ಯಾಗೋರ್ ಜಯಂತಿ
ಮೇ 8 : ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ. ವಿಶ್ವ ಥಲಸೇಮಿಯಾ ದಿನ
ಮೇ 9 : ವಿಶ್ವ ವಲಸೆ ಹಕ್ಕಿ ದಿನ
ಮೇ 10 : ವಿಶ್ವ ತಾಯಂದಿರ ದಿನ
ಮೇ 11 : ರಾಷ್ಟ್ರೀಯ ತಂತ್ರಜ್ಞಾನ ದಿನ (ಭಾರತ)
ಮೇ 12 : ಅಂತರಾಷ್ಟ್ರೀಯ ದಾದಿಯರ ದಿನ (ಭಾರತ)
ಮೇ 16 : ಡೆಂಗ್ಯೂ ತಡೆಗಟ್ಟುವ ದಿನ (ಭಾರತ)
ಮೇ 17 :ವಿಶ್ವ ದೂರಸಂಪರ್ಕ ದಿನ,
ವಿಶ್ವ ಮಾಹಿತಿ ಸಮಾಜದ ದಿನ
ಮೇ 18 : ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ
ಮೇ 20 : ವಿಶ್ವ ಮಾಪನಶಾಸ್ತ್ರ ದಿನ,
ವಿಶ್ವ ಜೇನುನೊಣ ದಿನ
ಮೇ 21 : ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
ಮೇ 22 : ಜೈವಿಕ ವೈವಿಧ್ಯತೆಯ ಅಂತಾರಾಷ್ಟ್ರೀಯ ದಿನ
ಮೇ 23 : ವಿಶ್ವ ಆಮೆ ದಿನ
ಮೇ 24 : ಕಾಮನ್‌ವೆಲ್ತ್ ದಿನ
ಮೇ 28 : ಮಹಿಳಾ ಆರೋಗ್ಯಕ್ಕಾಗಿ ಅಂತಾರಾಷ್ಟ್ರೀಯ ಕ್ರಿಯೆಯ ದಿನ
ಮೇ 29 : ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನ,
ಅಂತರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ (ನೇಪಾಳದಿಂದ ಆರಿಸಲ್ಪಟ್ಟಿದೆ)
ಮೇ 31 : ವಿಶ್ವ ತಂಬಾಕು ವಿರೋಧಿ ದಿನ

ಜೂನ್ 2023ರ ಪ್ರಮುಖ ದಿನಗಳು‌ :

ಜೂನ್ 1‌ : ವಿಶ್ವ ಹಾಲು ದಿನ
ಜೂನ್ 3 : ವಿಶ್ವ ಬೈಸಿಕಲ್ ದಿನ
ಜೂನ್ 4 : ಆಕ್ರಮಣಶೀಲತೆಯ ಬಲಿಪಶುಗಳ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ
ಜೂನ್ 5 : ವಿಶ್ವ ಪರಿಸರ ದಿನ
ಜೂನ್ 7 : ವಿಶ್ವ ಆಹಾರ ಸುರಕ್ಷತಾ ದಿನ
ಜೂನ್ 8 : ವಿಶ್ವ ಸಾಗರ ದಿನ
ಜೂನ್ 12 : ವಿಶ್ವ ಬಾಲಕಾರ್ಮಿಕ ವಿರೋಧಿ ದಿನ
ಜೂನ್ 14 : ವಿಶ್ವ ರಕ್ತದಾನಿಗಳ ದಿನ
ಜೂನ್ 15 : ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ
ಜೂನ್ 16 : ಅಂತರಾಷ್ಟ್ರೀಯ ಏಕೀಕರಣ ದಿನ
ಜೂನ್ 17 : ಮರುಭೂಮಿ ಮತ್ತು ಬರವನ್ನು ಎದುರಿಸಲು ವಿಶ್ವ ದಿನ
ಜೂನ್ 19 : ವಿಶ್ವ ಸಿಕಲ್ ಸೆಲ್ ದಿನ
ಜೂನ್ 20 : ವಿಶ್ವ ನಿರಾಶ್ರಿತರ ದಿನ
ಜೂನ್ 21 : ವಿಶ್ವ ಸಂಗೀತ ದಿನ, ಅಂತರಾಷ್ಟ್ರೀಯ ಯೋಗ ದಿನ
ಜೂನ್ 23 : ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ, ಅಂತರಾಷ್ಟ್ರೀಯ ಒಲಿಂಪಿಕ್ ದಿನ
ಜೂನ್ 26 : ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನ
ಜೂನ್ 29 : ರಾಷ್ಟ್ರೀಯ ಅಂಕಿಅಂಶ ದಿನ
ಜೂನ್ 3 ನೇ ಭಾನುವಾರ ಅಂತರಾಷ್ಟ್ರೀಯ ತಂದೆಯ ದಿನ

ಜುಲೈ 2023ರ ಪ್ರಮುಖ ದಿನಗಳು‌ :

ಜುಲೈ 1 : ರಾಷ್ಟ್ರೀಯ ವೈದ್ಯರ ದಿನ (ಭಾರತ)
ಜುಲೈ 2 : ವಿಶ್ವ UFO ದಿನ, ವಿಶ್ವ ಕ್ರೀಡಾ ಪತ್ರಕರ್ತರ ದಿನ
ಜುಲೈ 4 : ಅಂತರರಾಷ್ಟ್ರೀಯ ಸಹಕಾರಿ ದಿನ
ಜುಲೈ 11 : ವಿಶ್ವ ಜನಸಂಖ್ಯಾ ದಿನ
ಜುಲೈ 15 : ವಿಶ್ವ ಯುವ ಕೌಶಲ್ಯ ದಿನ
ಜುಲೈ 17 : ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ
ಜುಲೈ 18 : ಮಂಡೇಲಾ ದಿನ
ಜುಲೈ 26 : ಕಾರ್ಗಿಲ್ ಸ್ಮಾರಕ ದಿನ (ಭಾರತ)
ಜುಲೈ 28 : ವಿಶ್ವ ಹೆಪಟೈಟಿಸ್ ದಿನ
ಜುಲೈ 29 : ಅಂತರಾಷ್ಟ್ರೀಯ ಹುಲಿ ದಿನ
ಜುಲೈ 30 : ಅಂತರರಾಷ್ಟ್ರೀಯ ಸ್ನೇಹ ದಿನ

ಆಗಸ್ಟ್ 2023ರ ಪ್ರಮುಖ ದಿನಗಳು‌ :

ಆಗಸ್ಟ್ 1 :‌ ಪಾದ್ರಿಗಳ ಲೈಂಗಿಕ ದೌರ್ಜನ್ಯ ಜಾಗೃತಿ ದಿನ
ಆಗಸ್ಟ್ 6 : ಹಿರೋಷಿಮಾ ದಿನ
ಆಗಸ್ಟ್ 9 : ನಾಗಸಾಕಿ ದಿನ, ವಿಶ್ವ ಬುಡಕಟ್ಟು ದಿನ
ಆಗಸ್ಟ್ 10 : ವಿಶ್ವ ಜೈವಿಕ ಇಂಧನ ದಿನ, ವಿಶ್ವ ಸಿಂಹ ದಿನ
ಆಗಸ್ಟ್ 12 : ಅಂತರಾಷ್ಟ್ರೀಯ ಯುವ ದಿನ
ಆಗಸ್ಟ್ 15 : ಭಾರತದ ಸ್ವಾತಂತ್ರ್ಯ ದಿನ
ಆಗಸ್ಟ್ 19 : ವಿಶ್ವ ಮಾನವೀಯ ದಿನ
ಆಗಸ್ಟ್ 20 : ವಿಶ್ವ ಸೊಳ್ಳೆ ದಿನ
ಆಗಸ್ಟ್ 21 : ವಿಶ್ವ ಹಿರಿಯ ನಾಗರಿಕರ ದಿನ
ಆಗಸ್ಟ್ 29 : ರಾಷ್ಟ್ರೀಯ ಕ್ರೀಡಾ ದಿನ, ಪರಮಾಣು ಪರೀಕ್ಷೆಗಳ ವಿರುದ್ಧ ಅಂತರಾಷ್ಟ್ರೀಯ ದಿನ
ಆಗಸ್ಟ್ 30 : ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ

ಸೆಪ್ಟೆಂಬರ್ 2023ರ ಪ್ರಮುಖ ದಿನಗಳು‌ :

ಸೆಪ್ಟೆಂಬರ್ 2 :‌ ವಿಶ್ವ ತೆಂಗಿನಕಾಯಿ ದಿನ
ಸೆಪ್ಟೆಂಬರ್ 5 : ಶಿಕ್ಷಕರ ದಿನ (ಭಾರತ)
ಸೆಪ್ಟೆಂಬರ್ 8 : ಅಂತರರಾಷ್ಟ್ರೀಯ ಸಾಕ್ಷರತಾ ದಿನ
ಸೆಪ್ಟೆಂಬರ್ 14 : ಹಿಂದಿ ದಿನ (ಭಾರತ)
ಸೆಪ್ಟೆಂಬರ್ 15 : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ರಾಷ್ಟ್ರೀಯ ಇಂಜಿನಿಯರ್ ದಿನ
ಸೆಪ್ಟೆಂಬರ್ 16 : ವಿಶ್ವ ಓಝೋನ್ ದಿನ
ಸೆಪ್ಟೆಂಬರ್ 22 : ವಿಶ್ವ ಘೇಂಡಾಮೃಗ ದಿನ
ಸೆಪ್ಟೆಂಬರ್ 27 : ವಿಶ್ವ ಪ್ರವಾಸೋದ್ಯಮ ದಿನ; ವಿಶ್ವ ಸಾಗರ ದಿನ
ಸೆಪ್ಟೆಂಬರ್ 28 : ವಿಶ್ವ ರೇಬೀಸ್ ದಿನ
ಸೆಪ್ಟೆಂಬರ್ 29 : ವಿಶ್ವ ಹೃದಯ ದಿನ
ಸೆಪ್ಟೆಂಬರ್ 30 : ಅಂತರಾಷ್ಟ್ರೀಯ ಅನುವಾದ ದಿನ

ಅಕ್ಟೋಬರ್ 2023ರ ಪ್ರಮುಖ ದಿನಗಳು‌ :

ಅಕ್ಟೋಬರ್ 1 : ಹಿರಿಯರ ಅಂತಾರಾಷ್ಟ್ರೀಯ ದಿನ
ಅಕ್ಟೋಬರ್ 2 : ಗಾಂಧಿ ಜಯಂತಿ; ಅಂತರಾಷ್ಟ್ರೀಯ ಅಹಿಂಸಾ ದಿನ
ಅಕ್ಟೋಬರ್ 4 : ವಿಶ್ವ ಪ್ರಾಣಿ ಕಲ್ಯಾಣ ದಿನ
ಅಕ್ಟೋಬರ್ 5 : ವಿಶ್ವ ಶಿಕ್ಷಕರ ದಿನ
ಅಕ್ಟೋಬರ್ 8 : ಭಾರತೀಯ ವಾಯುಪಡೆ ದಿನ
ಅಕ್ಟೋಬರ್ 10 : ರಾಷ್ಟ್ರೀಯ ಅಂಚೆ ದಿನ
ಅಕ್ಟೋಬರ್ 13 :ನೈಸರ್ಗಿಕ ವಿಕೋಪ ಕಡಿತಕ್ಕಾಗಿ ವಿಶ್ವ ದಿನ
ಅಕ್ಟೋಬರ್ 15 : ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ
ಅಕ್ಟೋಬರ್ 16 : ವಿಶ್ವ ಆಹಾರ ದಿನ
ಅಕ್ಟೋಬರ್ 17 : ಅಂತರಾಷ್ಟ್ರೀಯ ಬಡತನ ನಿರ್ಮೂಲನೆ ದಿನ
ಅಕ್ಟೋಬರ್ 20 : ಅಂತರಾಷ್ಟ್ರೀಯ ಏರ್ ಟ್ರಾಫಿಕ್ ಕಂಟ್ರೋಲರ್ ದಿನ
ಅಕ್ಟೋಬರ್ 24 : ವಿಶ್ವಸಂಸ್ಥೆಯ ದಿನ, ವಿಶ್ವ ಅಭಿವೃದ್ಧಿ ಮಾಹಿತಿ ದಿನ, ವಿಶ್ವ ಪೋಲಿಯೋ ದಿನ
ಅಕ್ಟೋಬರ್ 27 :ವಿಶ್ವ ಶ್ರವ್ಯ ಪರಂಪರೆಯ ದಿನ
ಅಕ್ಟೋಬರ್ 28 : ರಾಷ್ಟ್ರೀಯ ಆಯುರ್ವೇದ ದಿನ
ಅಕ್ಟೋಬರ್ 30 : ವಿಶ್ವ ಮಿತವ್ಯಯ ದಿನ
ಅಕ್ಟೋಬರ್ 31 : ರಾಷ್ಟ್ರೀಯ ಏಕತಾ ದಿನ

ನವೆಂಬರ್ 2023ರ ಪ್ರಮುಖ ದಿನಗಳು‌ :

ನವೆಂಬರ್ 2 :‌ ಅಂತರರಾಷ್ಟ್ರೀಯ ಪತ್ರಕರ್ತರ ಸ್ಮರಣಾರ್ಥ ದಿನ
ನವೆಂಬರ್ 9 : ವಿಶ್ವ ಕಾನೂನು ಸೇವೆಗಳ ದಿನ
ನವೆಂಬರ್ 10 :ವಿಶ್ವ ರೋಗನಿರೋಧಕ ದಿನ
ನವೆಂಬರ್ 11 : ರಾಷ್ಟ್ರೀಯ ಶಿಕ್ಷಣ ದಿನ
ನವೆಂಬರ್ 12 : ವಿಶ್ವ ನ್ಯುಮೋನಿಯಾ ದಿನ
ನವೆಂಬರ್ 13 : ವಿಶ್ವ ದಯೆ ದಿನ
ನವೆಂಬರ್ 14 : ಮಕ್ಕಳ ದಿನ (ಭಾರತ)
ನವೆಂಬರ್ 16 : ಅಂತಾರಾಷ್ಟ್ರೀಯ ಸಹಿಷ್ಣುತೆ ದಿನ, ರಾಷ್ಟ್ರೀಯ ಪತ್ರಿಕಾ ದಿನ
ನವೆಂಬರ್ 17 :ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಿನ
ನವೆಂಬರ್ 18 : ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ದಿನ
ನವೆಂಬರ್ 19 : ಅಂತರಾಷ್ಟ್ರೀಯ ಪುರುಷರ ದಿನ, ರಾಷ್ಟ್ರೀಯ ಏಕೀಕರಣ ದಿನ (ಭಾರತ)
ನವೆಂಬರ್ 20 ಆಫ್ರಿಕಾ ಕೈಗಾರಿಕೀಕರಣ ದಿನ, ಸಾರ್ವತ್ರಿಕ ಮಕ್ಕಳ ದಿನ
ನವೆಂಬರ್ 21 : ವಿಶ್ವ ದೂರದರ್ಶನ ದಿನ, ವಿಶ್ವ ಮೀನುಗಾರಿಕಾ ದಿನ
ನವೆಂಬರ್ 25 : ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತರಾಷ್ಟ್ರೀಯ ದಿನ
ನವೆಂಬರ್ 26 : ರಾಷ್ಟ್ರೀಯ ಕಾನೂನು ದಿನ (ಭಾರತ), ಸಂವಿಧಾನ ದಿನ, ರಾಷ್ಟ್ರೀಯ ಹಾಲು ದಿನ
ನವೆಂಬರ್ 29 : ಪ್ಯಾಲೇಸ್ಟಿನಿಯನ್ ಜನರೊಂದಿಗೆ ಐಕಮತ್ಯದ ಅಂತರರಾಷ್ಟ್ರೀಯ ದಿನ

ಡಿಸೆಂಬರ್ 2023ರ ಪ್ರಮುಖ ದಿನಗಳು‌ :

ಡಿಸೆಂಬರ್ 1‌ : ವಿಶ್ವ ಏಡ್ಸ್ ದಿನ
ಡಿಸೆಂಬರ್ 2 : ಗುಲಾಮಗಿರಿ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನ
ಡಿಸೆಂಬರ್ 3 : ಅಂತರರಾಷ್ಟ್ರೀಯ ಅಂಗವಿಕಲರ ದಿನ
ಡಿಸೆಂಬರ್ 4 : ಭಾರತೀಯ ನೌಕಾಪಡೆಯ ದಿನ
ಡಿಸೆಂಬರ್ 7 : ಭಾರತೀಯ ಸಶಸ್ತ್ರ ಪಡೆ ಧ್ವಜ ದಿನ, ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
ಡಿಸೆಂಬರ್ 9 : ಭ್ರಷ್ಟಾಚಾರದ ವಿರುದ್ಧ ಅಂತಾರಾಷ್ಟ್ರೀಯ ದಿನ
ಡಿಸೆಂಬರ್ 10 : ಮಾನವ ಹಕ್ಕುಗಳ ದಿನ, ಅಂತರಾಷ್ಟ್ರೀಯ ಪ್ರಾಣಿ ಹಕ್ಕುಗಳ ದಿನ
ಡಿಸೆಂಬರ್ 11 : ಅಂತರರಾಷ್ಟ್ರೀಯ ಪರ್ವತ ದಿನ
ಡಿಸೆಂಬರ್ 14 : ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ (ಭಾರತ)
ಡಿಸೆಂಬರ್ 18 : ಅಂತರಾಷ್ಟ್ರೀಯ ವಲಸಿಗರ ದಿನ
ಡಿಸೆಂಬರ್ 20 : ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಡಿಸೆಂಬರ್ 22 : ರಾಷ್ಟ್ರೀಯ ಗಣಿತ ದಿನ
ಡಿಸೆಂಬರ್ 23 : ರೈತರ ದಿನ (ಭಾರತ)
ಡಿಸೆಂಬರ್ 25 : ಕ್ರಿಸ್ಮಸ್ ದಿನ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!