ಜಾಗತಿಕ ಉನ್ನತ ನಾಯಕರ ಪಟ್ಟಿ: ಅಗ್ರಸ್ಥಾನ ಕಾಯ್ದುಗೊಂಡ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾಗತಿಕ ಉನ್ನತ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.77ರಷ್ಟು ಅನುಮೋದನೆ ರೇಟಿಂಗ್ ನೊಂದಿಗೆ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ.

ಪ್ರಧಾನಿ ಮೋದಿ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (56%) ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ (41%) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಪಟ್ಟಿಯನ್ನು ಹಂಚಿಕೊಂಡಿದ್ದು, ‘ಮತ್ತೊಮ್ಮೆ ಪ್ರಧಾನಿ ನರೇಂಧ್ರ ಅವರು ಜಾಗತಿಕ ವೇದಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎಲ್ಲಾ ಪ್ರಮುಖ ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿಯವರ ಅನುಮೋದನೆ ರೇಟಿಂಗ್ ಗಳು ಅತ್ಯಧಿಕವಾಗಿವೆ. ಶೇ.77ರಷ್ಟು ಅನುಮೋದಿತ ರೇಟಿಂಗ್ ಗಳೊಂದಿಗೆ ಪ್ರಧಾನಿ ಮೋದಿ ಅವರು ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಅಂತ ಹೇಳಿಕೊಂಡಿದೆ.

ಬೈಡನ್ ನಂತರದ ಸ್ಥಾನದಲ್ಲಿ ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೋ ಶೇ.38 ಮತ್ತು ಹೊಸದಾಗಿ ನೇಮಕಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇ.36ರಷ್ಟು ಇದ್ದಾರೆ. ಶೇ.23ರಷ್ಟು ಅನುಮೋದನೆ ರೇಟಿಂಗ್ ಹೊಂದಿರುವ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಆರನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!