ಪಾರ್ಕ್‌ನಲ್ಲೊಂದು ಪುಟ್ಟ ಡಿಶುಂ ಡಿಶುಂ: ಜಗಳ ಬಿಡಿಸಲು ಬಂದವನೇ ಜಗಳಕ್ಕೆ ನಿಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೇಮಿಗಳ ಜಗಳಬಿಡಿಸಲು ಹೋದ ಫುಡ್ ಡೆಲಿವರಿ ಬಾಯ್ ಖುದ್ದು ತಾನೇ ಜಗಳಕ್ಕೆ ನಿಂತ ವಿಲಕ್ಷಣ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದ್ದು, ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ!
ಅಂದಹಾಗೆ ನಡೆದದ್ದು ಇಷ್ಟು…
ಭುವನೇಶ್ವರದ ಇಂದಿರಾ ಪಾರ್ಕ್‌ಗೆ ಆಗಮಿಸಿದ್ದ ಈ ಜೋಡಿ, ಕೆಲವೇ ಕ್ಷಣಗಳಲ್ಲಿ ಜಗಳಕ್ಕೆ ನಿಂತಿದ್ದಾರೆ. ಯುವತಿ ಯುವಕನ ಮೇಲೆ ಕಲ್ಲು  ಎಸೆದಿದ್ದಲ್ಲದೆ, ಆತನಿಗೆ ಥಳಿಸುತ್ತಾಳೆ. ಇವರಿಬ್ಬರ ಡಿಶುಂ ಡಿಶುಂ ಕಂಡು ಜನ ದೌಡಾಯಿಸುತ್ತಾರೆ. ಎಲ್ಲಾ ಕ್ಯಾಮರಾಗಳೂ ಈ ಜಗಳ ಮುದ್ರಿಸಿಕೊಳ್ಳಲು ಮುಂದಾಗುತ್ತವೆ. ಇದರಿಂದ ಯುವತಿ ಮತ್ತಷ್ಟು ಕೆರಳಿ ಅವರಿಂದ ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ.

 

ಇದೇ ಹೊತ್ತಿಗೆ ಫುಡ್ ಡೆಲಿವರಿ ಬಾಯ್ ಎಂಟ್ರಿ ಆಗುತ್ತದೆ. ಮಧ್ಯಸ್ಥಿಕೆ ವಹಿಸಲು ಬಂದ ಆತನನ್ನೂ ಯುವತಿ ತರಾಟೆಗೆತ್ತಿಕೊಂಡು ತಾಳ್ಮೆ ತಪ್ಪಿ  ಅವಾಚ್ಯ ಶಬ್ದ ಬಳಸುತ್ತಾಳೆ. ಕ್ಲೈಮಾಕ್ಸ್‌ನಲ್ಲಿ ಡೆಲಿವರಿ ಬಾಯ್ ತಾಳ್ಮೆ ಕಳೆದುಕೊಂಡು ಯುವತಿಗೆ ಥಳಿಸುತ್ತಾನೆ. ಆಗ ಸಾರ್ವಜನಿಕರು ಮೂವರ ನಡುವಿನ ಜಗಳ ಬಿಡಿಸಲು ಮುಂದಾಗುತ್ತಾರೆ.
ಈ ಬಗ್ಗೆ ಯಾರೂ ದೂರು ನೀಡಿಲ್ಲವಾದರೂ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಭುವನೇಶ್ವರ ಡಿಸಿಪಿ ಉಮಾ ಶಂಕರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!