Wednesday, August 10, 2022

Latest Posts

ಅಮೃತಬಳ್ಳಿ ಪುಡಿಯಿಂದ ಲಿವರ್ ತೊಂದರೆ ಬರುತ್ತಾ? ಆಯುಶ್ ಸಚಿವಾಲಯ ನೀಡಿದೆ ಸ್ಪಷ್ಟನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೃತಬಳ್ಳಿ ಪುಡಿ ಸೇವಿಸುವುದರಿಂದ ಲಿವರ್ ಸಮಸ್ಯೆ ಉಂಟಾಗುತ್ತದೆ ಎಂದು ಕ್ಲಿನಿಕಲ್ ಮತ್ತು ಪ್ರಾಯೋಗಿಕ ಹೆಪಿಟಾಲಜಿ ಪತ್ರಿಕೆಯ ವರದಿ ಕುರಿತು ಆಯುಶ್ ಸಚಿವಾಲಯ ಸ್ಪಷ್ಟನೆ ನೀಡಿದೆ.
ಹಿಂದಿನಿಂದಲೂ ಆಯುರ್ವೇದದಲ್ಲಿ ಅಮೃತಬಳ್ಳಿ (ಗಿಲೋಯ್, ಟಿ. ಕಾರ್ಡಿಫೋಲಿಯಾ) ಬಳಸಲಾಗುತ್ತಿದೆ. ಇದರ ಸೇವನೆ ಆರೋಗ್ಯಕ್ಕೆ ಕುತ್ತು ತರುತ್ತದೆ ಎನ್ನುವ ಲೇಖಕರು, ಅದಕ್ಕೆ ವ್ಯವಸ್ಥಿತವಾದ ವಿವರಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಇದು ಭಾರತದ ಸಾಂಪ್ರದಾಯಕ ಔಷಧದ ಬಗ್ಗೆ ಜನರಿಗೆ ದಾರಿತಪ್ಪಿಸುವ ಹೇಳಿಕೆಯಾಗಿದೆ.
ಮುಂಬೈನಲ್ಲಿ ಅಮೃತಬಳ್ಳಿ ಸೇವಿಸಿದ 6 ಮಂದಿಗೆ ಲಿವರ್ ಫೈಲ್ಯೂರ್ ಆಗಿದೆ ಎಂದು ಈ ಅಧ್ಯಯನ ತಿಳಿಸಿದೆ. ಆದರೆ ಅಮೃತಬಳ್ಳಿ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಲೇಖಕರು ಉನ್ನತ ಆಯುರ್ವೇದ ವೈದ್ಯರ ಸಂಪರ್ಕ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಈಗಾಗಲೇ ಗಿಲೋಯ್ ಪದದ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ 169 ಅಧ್ಯಯನಗಳು ಲಭ್ಯವಿದೆ. ಟಿನೋಸ್ಪೊರಾ ಕಾರ್ಡಿಫೋಲಿಯಾ ಮತ್ತು ಅದರ ಪರಿಣಾಮದ ಬಗ್ಗೆ ಸುಮಾರು 871 ಅಧ್ಯಯನಗಳು ಲಭ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss