ಅಪ್ಪ ಅಮ್ಮನ ಜತೆ ವಾಸ ಮಾಡೋದು ಅಮೆರಿಕದಲ್ಲಿ ಮತ್ತೆ ಟ್ರೆಂಡ್‌ ಆಗ್ತಿದೆ, ಯಾಕೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ವಯಸ್ಸಿಗೆ ಬಂದ ಮಕ್ಕಳು ಅಪ್ಪ-ಅಮ್ಮನೊಂದಿಗೆ ವಾಸಿಸುತ್ತಾರೆ ಎಂಬುದನ್ನು ಒಂಥರಾ ಆಶ್ಚರ್ಯದಿಂದ ನೋಡುತ್ತ ಮೂಗುಮುರಿಯುತ್ತಿದ್ದ ಅಮೆರಿಕದಲ್ಲೀಗ ಕಾಲ ಬದಲಾಗುತ್ತಿದೆ. US ನಲ್ಲಿ ದಾಖಲೆ ಸಂಖ್ಯೆಯ ಯುವ ವಯಸ್ಕರು ಪ್ರಸ್ತುತ ತಮ್ಮ ತಂದೆತಾಯಿಗಳೊಂದಿಗೆ ವಾಸಿಸುತ್ತಿದ್ದಾರೆ. ವಯಸ್ಕರ ಮಕ್ಕಳು ಅಪ್ಪ ಅಮ್ಮನೊಂದಿಗೆ ವಾಸಿಸುವುದು ಅಮೆರಿಕದಲ್ಲಿ ಈಗ ಮತ್ತೆ ಟ್ರೆಂಡ್‌ ಆಗುತ್ತಿದೆ.

US ಸೆನ್ಸಸ್ ಬ್ಯೂರೋದ ಇತ್ತೀಚಿನ ಮಾಹಿತಿಯು 18 ಮತ್ತು 29 ರ ವಯಸ್ಸಿನ ಸುಮಾರು ಅರ್ಧದಷ್ಟು ಯುವ ಅಮೆರಿಕನ್ನರು ಇಂದು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ತೋರಿಸಿದೆ. ಇದು ಗ್ರೇಟ್ ಡಿಪ್ರೆಶನ್ ಯುಗದಿಂದಲೂ ಕಂಡುಬರದ ಐತಿಹಾಸಿಕ ದಾಖಲೆಯ ಸಂಖ್ಯೆಯಾಗಿದೆ ಎಂದು ಮಾರ್ಗನ್ ಸ್ಟಾನ್ಲಿ ವಿಶ್ಲೇಷಕರು ಉಲ್ಲೇಖಿಸಿದ್ದಾರೆ. ವಿಶ್ಲೇಷಕರು ಅಂದಾಜಿಸಿರುವ ಪ್ರಕಾರ ಸುಮಾರು 48% ಯುವ ವಯಸ್ಕರು 2022 ರಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ, ಇದು 1940 ರ ದಶಕದಲ್ಲಿ ಕಂಡುಬರುವ ಮಟ್ಟವನ್ನು ಹೋಲುತ್ತದೆ. 2020ರ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿ ವಾಸಿಸುವ ಯುವ ವಯಸ್ಕರ ಮಟ್ಟವು 49.5 ಶೇ. ದಾಖಲೆಯ ಗರಿಷ್ಟ ಮಟ್ಟವನ್ನು ತಲುಪಿತ್ತು ಎನ್ನಲಾಗಿದೆ.

ಆದರೆ ಇದರ ಹಿಂದಿನ ಕಾರಣ ತಿಳಿದರೆ ನೀವು ಅಚ್ಚರಿಪಡುತ್ತೀರಿ. ಹೀಗೆ ಒಟ್ಟಿಗೆ ಇರುವ ಮೂಲಕ ಅವರು ತಮ್ಮ ಮನೆಯ ಬಾಡಿಗೆ, ದಿನಸಿಗಳು ಇತ್ಯಾದಿಗಳ ಮೇಲೆ ಭಾರೀ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಿದ್ದಾರೆ. ಹೀಗೆ ಉಳಿತಾಯ ಮಾಡಿದ ಹಣದಿಂದ ಅವರು ಐಷಾರಾಮಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚಿಂತಿಸುತ್ತಿದ್ದಾರೆ. ಬಾಡಿಗೆ ಮತ್ತು ದಿನಸಿಗಳಂತಹ ದೈನಂದಿನ ಅಗತ್ಯಗಳ ಮೇಲೆ ಉಳಿತಾಯವು ದುಂದುವೆಚ್ಚವನ್ನು ಕಡಿಮೆಗೊಳಿಸುತ್ತಿದೆ. ಹೀಗಾಗಿ ಅವರ ತಂದೆ ತಾಯಿಯವರೊಂದಿಗೆ ಒಟ್ಟಾಗಿ ಇರಲು ಯುವಕರು ಮುಂದಾಗಿದ್ದಾರೆ ಎಂದು ವಿಶ್ಲೇಶಕರು ವಿವರಿಸಿದ್ದಾರೆ.

ಅಲ್ಲದೇ ಹೆಚ್ಚಿನ ಬಾಡಿಗೆ ವೆಚ್ಚಗಳು, ಉನ್ನತ ಶಿಕ್ಷಣ ಕಾರ್ಯಕ್ರಮಗಳಲ್ಲಿ ದಾಖಲಾತಿ ಮತ್ತು ಮದುವೆಯಲ್ಲಿ ವಿಳಂಬದಂತಹ ಅಂಶಗಳು ಯುವ ವಯಸ್ಕರು ಮನೆಯಲ್ಲಿಯೇ ಉಳಿಯಲು ಕಾರಣವಾಗಿದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!