spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೈತರ ಬೆಳೆ, ಸ್ವಸಹಾಯ ಗುಂಪುಗಳ ಸಾಲದ ಸಹಾಯಧನ 10 ಕೋಟಿ ರೂ. ಶೀಘ್ರ ಬಿಡುಗಡೆ: ಸಿ.ಪಿ. ಉಮೇಶ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………….

ಹೊಸ ದಿಗಂತ ವರದಿ ಮಂಡ್ಯ:

ಜಿಲ್ಲೆಯ ರೈತರ ಬೆಳೆ ಸಾಲ ಮತ್ತು ಸ್ವಸಹಾಯ ಗುಂಪುಗಳ ಸಾಲಕ್ಕೆ ಸಹಾಯಧನವಾಗಿ 10 ಕೋಟಿ ರೂ.ಗಳನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಶೀಘ್ರ ಬಿಡುಗಡೆ ಮಾಡುವುದಾಗಿ ಅಧ್ಯಕ್ಷ ಸಿ.ಪಿ. ಉಮೇಶ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ. ರೈತರ ಬೆಳೆ ಸಾಲಕ್ಕೆ 8 ಕೋಟಿ ಹಾಗೂ ಸ್ವಸಹಾಯ ಗುಂಪುಗಳ ಸಾಲಕ್ಕೆ 2 ಕೋಟಿ ರೂ ನೀಡಲಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದ ಕಾರಣದಿಂದ ಏಪ್ರಿಲ್, ಮೇ, ಜೂನ್ ತಿಂಗಳ ಬಡ್ಡಿ ಸಹಾಯ ಧನ ನೀಡುತ್ತಿದೆ. ಇದರಿಂದ ರೈತರಿಗೆ ಬಡ್ಡಿ ಹೊರೆ ಇರುವುದಿಲ್ಲ. ಮೂರು ತಿಂಗಳ ಸಾಲದ ಕಂತನ್ನು ಒಂದೇ ಬಾರಿಗೆ ಪಾವತಿಸುವ ಷರತ್ತಿಲ್ಲ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಡಿಸಿಸಿ ಬ್ಯಾಂಕ್ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಬ್ಯಾಂಕಿನ ಪ್ರಗತಿಗೆ ಪೂರಕವಾಗಿ ಅನುದಾನವನ್ನು ನೀಡುವುದಕ್ಕೆ ಸಿದ್ಧರಿದ್ದು, ಬ್ಯಾಂಕ್ ರೈತರಿಗೆ ನೇರವಾಗಿ ಸಿಗುವಂತೆ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ. ಆ ದಿಸೆಯಲ್ಲಿ ಆಡಳಿತ ಮಂಡಳಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

870 ಕೋಟಿ ರೂ. ವಿತರಣೆ ಗುರಿ:
ಪ್ರಸಕ್ತ ಸಾಲಿನಲ್ಲಿ 1,36,802 ರೈತರಿಗೆ 870 ಕೋಟಿ ರು. ಬೆಳೆ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಕಳೆದ ವರ್ಷ 775.61 ಕೋಟಿ ರೂ. ಬೆಳೆ ಸಾಲ ನೀಡಲಾಗಿತ್ತು. ಈ ವರ್ಷ ಹೆಚ್ಚುವರಿಯಾಗಿ 100 ಕೋಟಿ ರೂ. ಸಾಲ ನೀಡುವುದಾಗಿ ಹೇಳಿದರು.

ಜಿಲ್ಲೆಯ 542 ಜನರಿಗೆ 9.77 ಕೋಟಿ ರೂ. ಮಧ್ಯಮಾವಧಿ ಸಾಲ, 3987 ಸ್ವಸಹಾಯ ಗುಂಪುಗಳಿಗೆ 186.92 ಕೋಟಿ ರೂ. ಹಾಗೂ 54315 ಜನರಿಗೆ 685.60 ಕೋಟಿ ರೂ. ಕೃಷಿಯೇತರ ಸಾಲ ನೀಡಲು ಉದ್ದೇಶಿಸಲಾಗಿದೆ. ಅದೇ ರೀತಿ ಕೃಷಿ ಸಾಲ ವಸೂಲಾತಿ ಶೇ.98.07ರಷ್ಟು ಹಾಗೂ ಕೃಷಿಯೇತರ ಸಾಲ ವಸೂಲಾತಿ ಶೇ.98.86ರಷ್ಟು ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss