Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

LOCKDOWN 4.0 ಬಿಡುಗಡೆಯಾಯಿತು ಮಾರ್ಗದರ್ಶಿ: ಏನೇನಿದೆ ಹೊಸ ಗೈಡ್ ಲೈನ್ಸ್?

sharing is caring...!

ಹೊಸದಿಲ್ಲಿ: ಕೇಂದ್ರ ಸರಕಾರ ಆದಿತ್ಯವಾರ ಲಾಕ್‌ಡೌನ್ 4.0 ಘೋಷಿಸಿದ್ದು, ಅದರ ಮಾರ್ಗದರ್ಶಿ ಸೂತ್ರಗಳನ್ನೂ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯಗಳ ಕೇಳಿಕೆಯಂತೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಕೆಲವು ಮಾರ್ಪಾಟುಗಳನ್ನು ಮಾಡಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಕಾರ(ಎನ್‌ಡಿಎಂಎ)ದ ಕೇಳಿಕೆಯಂತೆ ಕೇಂದ್ರ ಗೃಹಸಚಿವಾಲಯ ಲಾಕ್‌ಡೌನ್ ಅವಧಿಯನ್ನು ಎರಡು ವಾರಗಳ ಕಾಲ ವಿಸ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ 4.0ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಏನೇನಿದೆ ಹೊಸ ಗೈಡ್ ಲೈನ್ಸ್ ನಲ್ಲಿ?

 1. ಆಂತರಿಕ ವೈದ್ಯಕೀಯ ಸೇವೆ ಮತ್ತು ಆಂತರಿಕ ಏರ್ ಅಂಬ್ಯುಲೆನ್ಸ್ , ಭದ್ರತಾ ಉದ್ದೇಶದ ಹಾರಾಟ ಹೊರತು ಪಡಿಸಿ ಎಲ್ಲ ಆಂತರಿಕ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣ ಗೃಹಸಚಿವಾಲಯದ ನಿರ್ದೇಶನಗಳಂತೆಯೇ ನಡೆಯಬೇಕು.
 2. ಶಾಲೆಗಳು, ಕಾಲೇಜುಗಳು, ಶಿಕ್ಷಣ/ ತರಬೇತಿ/ ಕೋಚಿಂಗ್ ಸಂಸ್ಥೆಗಳು ಮುಚ್ಚಿಯೇ ಇರುತ್ತವೆ.ಆನ್‌ಲೈನ್/ ದೂರಶಿಕ್ಷಣ ವ್ಯವಸ್ಥೆಗೆ ಅನುಮತಿ ನೀಡಲಾಗಿದ್ದು, ಇದನ್ನು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ.
 3. ಆರೋಗ್ಯ/ ಪೊಲೀಸ್/ ಸರಕಾರಿ ಅಧಿಕಾರಿಗಳು/ ಆರೋಗ್ಯಸೇವಾ ಕಾರ್ಯಕರ್ತರು/ ಕ್ವಾರಂಟೈನ್ ಸೌಲಭ್ಯಕ್ಕಾಗಿ ಕಾದಿರುವ ಪ್ರವಾಸಿಗರು ಸೇರಿದಂತೆ ಸಿಕ್ಕಿಹಾಕಿಕೊಂಡ ವ್ಯಕ್ತಿಗಳು, ಬಸ್ ಡಿಪೋಗಳಲ್ಲಿ ಕ್ಯಾಂಟೀನ್ ನಡೆಸುವವರು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಇತರೆಡೆ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಇತರ ಆತಿಥ್ಯ ಸೇವೆಗಳು ಮುಚ್ಚಿರುತ್ತವೆ.
 4. ಎಲ್ಲ ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್ನಾಷಿಯಂ, ಸ್ವಿಮ್ಮಿಂಗ್‌ಪೂಲ್ಸ್, ಮನರಂಜನಾ ಪಾರ್ಕ್‌ಗಳು, ಥಿಯೇಟರ್‌ಗಲು, ಬಾರ್‌ಗಲು, ಆಡಿಟೋರಿಯಂಗಲು, ಅಸೆಂಬ್ಲಿ ಹಾಲ್‌ಗಳು ಮತ್ತು ಇಂತಹ ಇತರ ಪ್ರದೇಶಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳನ್ನು ತೆರೆಯಲು ಅನುಮತಿ ನೀಡಬಹುದು. ಆದರೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗದು.
 5. ಎಲ್ಲ ಸಾಮಾಜಿಕ/ ರಾಜಕೀಯ/ ಕ್ರೀಡಾ/ ಮನರಂಜನಾ/ ಅಕಾಡೆಮಿಕ್/ ಸಾಂಸ್ಕೃತಿಕ/ ಧಾರ್ಮಿಕ ಕಾರ್ಯಕ್ರಮಗಳು/ಇತರ ಜನಸಮೂಹ ಸೇರುವ ಕಾರ್ಯಕ್ರಮ, ಜನಜಮಾಯಿಸುವಿಕೆ ಕಾರ್ಯಕ್ರಮಗಳು, ಎಲ್ಲ ಧಾರ್ಮಿಕ ಕೇಂದ್ರಗಳು, ಪೂಜಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಮುಂದುವರಿಕೆ. ಧಾರ್ಮಿಕ ಸಮಾವೇಶಗಳಿಗೆ ಕಟ್ಟುನಿಟ್ಟಿನ ನಿಷೇಧ.
 6. ಅಂತಾರಾಜ್ಯ ಪ್ರಯಾಣಿಕ ವಾಹನಗಳು, ಬಸ್ಸುಗಳ ಸಂಚಾರ ಪರಸ್ಪರ ಒಮ್ಮತವಿದ್ದರೆ ಅವಕಾಶ
 7. ಅಗತ್ಯ ಸೇವೆಗಳನ್ನು ಹೊರತುಪಡಿಸಿ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಜನ ಸಂಚಾರಕ್ಕೆ ಕಠಿಣ ನಿರ್ಬಂಧ
 8. ಕಂಟೈನ್‌ಮೆಂಟ್ ಝೋನ್‌ನಲ್ಲಿ ಸಂಪರ್ಕ ಪತ್ತೆ, ಮನೆ ಮನೆ ನಿಗಾ ಮತ್ತು ಇತರ ಚಿಕಿತ್ಸಾ ಕ್ರಮಗಳಿಗೆ ವಿಶೇಷ ಒತ್ತು ನೀಡಬೇಕು.
 9. ರೆಡ್‌ಝೋನ್ ಮತ್ತು ಆರೆಂಜ್ ಝೋನ್ , ಕಂಟೈನ್‌ಮೆಂಟ್ ಝೋನ್ ಮತ್ತು ಬಫರ್‌ಝೋನ್‌ಗಳನ್ನು ಜಿಲ್ಲಾ ಆಡಳಿತಗಳು ಗೃಹಸಚಿವಾಲಯದ ಮಾರ್ಗದರ್ಶಿ ಸೂತ್ರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಂತೆ ವರ್ಗೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದು.
 10. ಈ ಝೋನ್‌ಗಳನ್ನು ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೇ ಗೃಹಸಚಿವಾಲಯದ ಮಾರ್ಗದರ್ಶಿ ಸೂತ್ರಗಳನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸೇರಿ ರೂಪಿಸಿದ ಮಾನದಂಡಗಳಂತೆ ನಿರ್ಧರಿಸಬೇಕು.
 11. ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಟ್ಯಾಕ್ಸಿ ಮತ್ತು ಅಟೋ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಈ ಕುರಿತು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಂದೇಶ ರವಾನಿಸಿರುವ ಕೇಂದ್ರ ಗೃಹ ಸಚಿವಾಲಯ, ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟುವ ಉದ್ದೇಶದಿಂದ ಬಿಡುಗಡೆ ಮಾಡಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಸ್ಪಷ್ಟಪಡಿಸಿದೆ.

Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಜೊತೆಗಿದ್ದ ಹರೀಶ್ ಪೂಂಜಾ ಅವರು ಸಿಎಂಗೆ...

Don't Miss

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...
error: Content is protected !!