spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಲಾಕ್ ಡೌನ್ ಹೆಸರಲ್ಲಿ ಅಮಾಯಕರ ಮೇಲೆ ಕ್ರಮ, ಪೊಲೀಸರ ವರ್ತನೆ ಖಂಡನೀಯ: ಮಂಜುನಾಥ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………

ಹೊಸ ದಿಗಂತ ವರದಿ, ಕೋಲಾರ:

ರಾಜ್ಯ ಸರಕಾರದ ಲಾಕ್‌ಡೌನ್ ಜಾರಿಯ ಘೋಷಣೆ ಹೆಸರಲ್ಲಿ ಸವಿತಾ ಸಮಾಜದ ಅಮಾಯಕರನ್ನು ವಿನಾಕಾರಣ ಪೊಲೀಸ್ ಠಾಣೆಗೆ ಕರೆ ತಂದು ಕೂಡಿ ಹಾಕುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಎಸ್. ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ರೀತಿಯ ಅಮಾನವೀಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದ್ದಾರೆ.
ಸರಕಾರ ಲಾಕ್ ಡೌನ್ ನಲ್ಲಿ ಬೆಳಗ್ಗೆ 6 ರಿಂದ 10ರ ವರೆಗೂ ಅವಕಾಶ ನೀಡಿರುವ ನಿಟ್ಟಿನಲ್ಲಿ ಕ್ಷೌರಿಕರಿಗೆ ಮತ್ತು ಬಟ್ಟೆ ಐರನ್ ಮಾಡುವ ಅಂಗಡಿಗಳಿಗೂ ಸಹಕಾರಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರ ನೊಂದವರಿಗೆ ಸ್ಪಂದಿಸುವಲ್ಲಿ ಮಲತಾಯಿ ಧೋರಣೆಂ ಅನುಸರಿಸುತ್ತಿದ್ದು, ಮದ್ಯ ದ ಅಂಗಡಿಗಳಿಗೆ ಹಾಗೂ ಹೋಟೆಲ್ ಗಳಿಗೆ ಅವಕಾಶ ಮಾಡಿಕೊಟ್ಟಿರುವ ಮಾದರಿಯಲ್ಲಿ ದಿನ ನಿತ್ಯದ ಕುಟುಂಬ ಪೋಷಣೆಯಲ್ಲಿ ಇರುವ ಕೌರಿಕ ವೃತ್ತಿ ಮಡಿವಾಳ ವೃತ್ತಿ ಇವರಿಗೆ ಅವಕಾಶವನ್ನು ನೀಡದೆ ಇರುವುದು ದುರದೃಷ್ಟಕಾರ ಸಂಗತಿಯ ವಿಚಾರ ವಾಗಿದೆ ಎಂದು ದೂರಿದರು.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap