Wednesday, August 10, 2022

Latest Posts

ಕೊರೋನಾ ಭೀತಿ: ಇಂದಿನಿಂದ ಮಾರ್ಚ್ 21ರವರೆಗೆ ಲಾಕ್ ಡೌನ್ ಘೋಷಣೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಕೊರೋನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಾಗ್ಪುರದಲ್ಲಿ ಇಂದಿನಿಂದ ಒಂದು ವಾರದವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.

ನಾಗ್ಪುರ್ ದ ಉಸ್ತುವಾರಿ ಸಚಿವ ನಿತಿನ್ ರಾವುತ್ ಅವರ ನೇತೃತ್ವದಲ್ಲಿ ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ.

ಸಾಪ್ತಾಹಿಕ ಮಾರುಕಟ್ಟೆಗಳು, ಶೈಕ್ಷಣಿಕ ಸಂಸ್ಥೆಗಳು, ಮದುವೆ ಸಭಾಂಗಣಗಳು ಮತ್ತು ಇತರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಚ್ಚುವಂತೆ ಆದೇಶಿಸಿಸಲಾಗಿದೆ.

ರಾಜ್ಯದ ದೈನಂದಿನ ಅಂಕಿ-ಅಂಶಗಳಲ್ಲಿ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ನಾಗ್ಪುರ್ ನೀಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss