Thursday, July 7, 2022

Latest Posts

ಲಾಕ್‍ ಡೌನ್ ವಿನಾಯಿತಿ: ಕೋವಿಡ್ ಸೋಂಕು ಹೆಚ್ಚಳದ ಭೀತಿಯಲ್ಲಿ ಕಾಸರಗೋಡಿನ ಜನತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಎಂದಿನಂತೆ ಜಾರಿಯಲ್ಲಿರುವ ವಾರಾಂತ್ಯ ಕೋವಿಡ್ ನಿಯಂತ್ರಣದಲ್ಲಿ ಜುಲೈ 18 ರಿಂದ ಮೂರು ದಿನಗಳ ಕಾಲ ವಿನಾಯಿತಿ ಪ್ರಕಟಿಸುತ್ತಿದ್ದಂತೆಯೇ ಪೇಟೆಗಳಲ್ಲಿ ಜನದಟ್ಟಣೆ ಹೆಚ್ಚಲು ಕಾರಣವಾಗುತ್ತಿದೆ. ಅದರಂತೆ ಕಾಸರಗೋಡು ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಬಕ್ರೀದ್ ಹಬ್ಬ ಜುಲೈ 21 ರಂದು ನಡೆಯಲಿದ್ದು , ಜನತೆ ಬಟ್ಟೆಬರೆ, ಚಪ್ಪಲಿ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳದ ಭೀತಿಯೂ ತಲೆದೋರಿದೆ.
ಬಕ್ರೀದ್ ಹಿನ್ನೆಲೆಯಲ್ಲಿ ಕೇರಳ ಸರಕಾರವು ಮೂರು ದಿನಗಳ ಕೋವಿಡ್ ನಿಬಂಧನೆಯಲ್ಲಿ ವಿನಾಯಿತಿ ಪ್ರಕಟಿಸುತ್ತಿದ್ದಂತೆ ಜನತೆಯ ಓಡಾಟ ಹೆಚ್ಚಳಗೊಂಡಿದೆ. ಇನ್ನೊಂದೆಡೆ ಜನರು ಅನಗತ್ಯವಾಗಿ ಅಡ್ಡಾಡುತ್ತಿರುವ ಬಗ್ಗೆ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದಾರೆ. ಲಾಕ್‍ ಡೌನ್ ವಿನಾಯಿತಿ ಘೋಷಿಸಿದ್ದರೂ ಅದು ದುರುಪಯೋಗವಾಗದಂತೆ ನೋಡಿಕೊಳ್ಳಲು ಪೊಲೀಸರು ಸಮರ್ಪಕ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಜನದಟ್ಟಣೆಗೆ ಅವಕಾಶ ಮಾಡಿಕೊಡಬಾರದು ಎಂದು ಸರಕಾರವು ತಿಳಿಸಿದೆ. ಆದರೆ ಜನದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಕೇರಳದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದರೂ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲಾಕ್‍ ಡೌನ್ ವಿನಾಯಿತಿ ಕಲ್ಪಿಸಿರುವುದು ವ್ಯಾಪಕ ಟೀಕೆಗೂ ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರದಂದು ಸಂಪೂರ್ಣ ಲಾಕ್‍ ಡೌನ್ ಸೇರಿದಂತೆ ಕಟ್ಟುನಿಟ್ಟಿನ ನಿಯಂತ್ರಣದ ನಡುವೆಯೂ ಟಿಪಿಆರ್ ಇಳಿಮುಖಗೊಳಿಸಲು ಸಾಧ್ಯವಾಗದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss