ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಭೀತಿ: ಊರು ಬಿಟ್ಟು ಹೊರಟ ವಲಸಿಗರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮಿತಿ ಮೀರಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಈಗಾಗಲೇ ನೈಟ್ ಕರ್ಫ್ಯೂ ಜಾರಿಮಾಡಲಾಗಿದ್ದು, ಲಾಕ್‌ಡೌನ್‌ ಮಾತುಗಳು ಕೇಳಿಬರುತ್ತಿದೆ.
ಇದರಿಂದ ಮುಂಬೈಗೆ ಕೆಲಸಕ್ಕಾಗಿ ಬಂದ ವಲಸೆ ಕಾರ್ಮಿಕರು ಮತ್ತೆ ಮಹಾರಾಷ್ಟ್ರವನ್ನು ತೊರೆಯತೊಡಗಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಕೆಲದಿನಗಳಿಂದ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ.
ಮುಂಬೈ-ಆಗ್ರಾ ರಸ್ತೆ ಎಂದೇ ಪ್ರಸಿದ್ಧವಾಗಿದ್ದ ಹೆದ್ದಾರಿಯಲ್ಲಿ ಮೋಟರ್‌ ಸೈಕಲ್‌ಗಳಲ್ಲಿ, ಕಪ್ಪು-ಹಳದಿ ಬಣ್ಣದ ಮಿನಿಟ್ರಕ್‌ಗಳಲ್ಲಿ ಮತ್ತು ಆಟೊಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಊರಿಗೆ ಮರಳುತ್ತಿದ್ದಾರೆ.
ಈಗಾಗಲೇ ಕಳೆದ ಒಂದು ವರ್ಷಗಳಿಂದ ಕೊರೋನಾದಿಂದ ಅನೇಕ ಜನರು ಕೆಲಸವಿಲ್ಲದೆ ಪರದಾಡುತ್ತಿದ್ದು, ಇದೀಗ ಮತ್ತೆ ಲಾಕ್ ಡೌನ್ ಹೇರುವ ಭೀತಿಯಲ್ಲಿ ನಾವೆಲ್ಲಾ ಊರಿಗೆ ಹೋಗುತ್ತಿದ್ದೇವೆಎಂದು ಆಟೊದಲ್ಲಿದ್ದ ಉತ್ತರ ಪ್ರದೇಶದ ಬಲಿಯಾ ಪಟ್ಟಣದ ರಾಮಶರಣ್‌ ಸಿಂಗ್ ಹೇಳಿದರು.
‌ ‘ನಾನು ಮುಂಬೈನ ರೆಸ್ಟೊರಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸೋಂಕು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಲ್ಲಿ ಮಾತ್ರ ಅಲ್ಲಿಗೆ ಮರಳುತ್ತೇನೆ. ಇಲ್ಲವಾದರೆ ಊರಲ್ಲೇ ಕೆಲಸ ಹುಡುಕುತ್ತೇನೆ ಬಿಹಾರದ ಭೋಜಪುರ ಜಿಲ್ಲೆಯ ಮೊಹಮ್ಮದ್‌ ಶದಾಬ್ ಹೇಳಿದ್ದಾನೆ.
ಕಳೆದ ವರ್ಷ ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳುವ ಧಾವಂತದಲ್ಲಿ ವಾಹನಗಳ ಓಡಾಟ ವಿಪರೀತವಾಗಿ ಈ ರಸ್ತೆಯಲ್ಲಿ ದೊಡ್ಡ ಮಟ್ಟಿಗೆ ಸಂಚಾರ ಸಮಸ್ಯೆ ತಲೆದೋರಿತ್ತು. ಪ್ರತಿಕೂಲ ಹವೆಯ ಜೊತೆ, ಕೋವಿಡ್‌ ನಿರ್ಬಂಧಗಳಿಂದ ಬಿಹಾರ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳ ಬಹುತೇಕ ಕಾರ್ಮಿಕರು ಹೈರಾಣಾಗಿದ್ದರು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss