spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಮಾನಯಾನ ಉದ್ಯಮವೇ ನೆಲಕಚ್ಚಿ ಕೂತಿರುವಾಗ ಹೊಸ ಕಂಪನಿ ತೆಗೆಯಹೊರಟನೇಕೆ ಭಾರತದ ಈ ಶ್ರೀಮಂತ?

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

……………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ರಾಕೇಶ್ ಜುಂಜನವಾಲಾ.

ಷೇರು ಮಾರುಕಟ್ಟೆ ಬಗ್ಗೆ ಸ್ವಲ್ಪವೇ ಗೊತ್ತಿರುವವರಿಗೂ ಈ ಹೆಸರು ಪರಿಚಿತ. ಹೂಡಿಕೆ ವಲಯದಲ್ಲಿ ಭಾರತದ ವಾರನ್ ಬಫೆಟ್ ಎಂಬ ಖ್ಯಾತಿಯನ್ನೇ ಗಳಿಸಿರುವ ಜುಂಜನವಾಲಾ ಯಾವ ಕ್ಷೇತ್ರಗಳ ಮೇಲೆ ಆಸಕ್ತಿ ತೋರುತ್ತಾರೋ ಅತ್ತ ವಾಲಿಕೊಳ್ಳುವ ಜನರ ಗುಂಪೇ ಇದೆ. ಜುಂಜನವಾಲಾ ಲೆಕ್ಕಾಚಾರ ಅಷ್ಟು ಸುಲಭಕ್ಕೆ ತಪ್ಪಾಗುವುದಿಲ್ಲ ಎಂಬ ವಿಶ್ವಾಸ ಅದು.

ಇಂತಿಪ್ಪ ಜುಂಜನವಾಲಾ ಈಗ ಹೊಸದಾಗಿ ಶುರುವಾಗಿರುವ ವಿಮಾನಯಾನ ಕಂಪನಿ ‘ಆಕಾಸ್’ನಲ್ಲಿ ಹಣ ಹೂಡಿ, ನಲ್ವತ್ತು ಶೇಕಡ ಒಡೆತನವನ್ನು ಹೊಂದುತ್ತಿರುವುದು ಮಾರುಕಟ್ಟೆ ಪಂಡಿತರೆಲ್ಲರ ತಲೆಕೆಡುವಂತೆ ಮಾಡಿದೆ. 

ಎಲ್ಲರೂ ಕೇಳುತ್ತಿರುವ ಪ್ರಶ್ನೆ ಸರಳ. ಕೋವಿಡ್ ಕಾಲದಲ್ಲಿ ಅತಿಯಾಗಿ ಹೊಡೆಸಿಕೊಂಡಿರುವುದೇ ವಿಮಾನಯಾನ ಮತ್ತು ಪ್ರವಾಸೋದ್ಯಮ. ದೊಡ್ಡ ದೊಡ್ಡ ವಿಮಾನಯಾನ ಕಂಪನಿಗಳೇ ನಷ್ಟದಲ್ಲಿ ಒದ್ದಾಡುತ್ತಿವೆ. ಇಂಥ ಸಮಯದಲ್ಲಿ ಜುಂಜನವಾಲಾರದ್ದು ಇದೆಂಥ ಲೆಕ್ಕಾಚಾರ?

ಈ ಬಿಸಿನೆಸ್ ಲೆಕ್ಕಾಚಾರವೇ ರೋಚಕ

ಇಂಡಿಗೋ, ಗೋಏರ್, ಸ್ಪೈಸ್ ಜೆಟ್ ನಂಥ ಕಂಪನಿಗಳೇ ಕೋವಿಡ್ ಹೊಡೆತಕ್ಕೆ ಕಂಪಿಸಿ ಹೋಗಿರುವುದೇನೋ ಖರೆ. ಆದರೆ ಇವರೆಲ್ಲರ ಬಿಕ್ಕಟ್ಟೇ ವಿಮಾನಯಾನ ವಿಭಾಗದಲ್ಲಿ ಹೊಸ ಆಟಗಾರರ ಆಗಮನಕ್ಕೆ ದಾರಿ ಮಾಡಿಕೊಟ್ಟಿದೆ. 

ಹೆಚ್ಚಿನ ವಿಮಾನಯಾನ ಕಂಪನಿಗಳು ವಿಮಾನವನ್ನು ಖರೀದಿ ಮಾಡದೇ ಅವನ್ನು ಬೋಯಿಂಗ್ ಥರದ ಕಂಪನಿಗಳಿಂದ ಲೀಸಿಗೆ ಪಡೆದು ಓಡಿಸುವ ಮಾದರಿ ಹೊಂದಿವೆ. ಹೀಗೆ ಲೀಸಿಗೆ ಕೊಡುವ ಕಂಪನಿಗಳು ಕೋವಿಡ್ ಅಪ್ಪಳಿಸುವುದಕ್ಕೆ ಮುಂಚೆ ವಿಮಾನಪ್ರಯಾಣದ ಏರುಗತಿಯ ಟ್ರೆಂಡ್ ನೋಡಿ ಹಲವು ಹೊಸ ವಿಮಾನಗಳನ್ನು ಲೀಸಿಗೆ ಸಿದ್ಧಗೊಳಿಸಿಸುತ್ತಿದ್ದಾಗಲೇ ಕೋವಿಡ್ ಬಡಿದು ಉದ್ಯಮದ ಎಲ್ಲ ಲೆಕ್ಕಾಚಾರ ತಲೆಕೆಳಗಾಯಿತು. ಹೀಗಾಗಿ ಹೊಸ ಆಟಗಾರರೀಗ ತುಂಬ ಚೌಕಾಶಿ ಬೆಲೆಯಲ್ಲಿ ವಿಮಾನಗಳನ್ನು ಲೀಸಿಗೆ ಪಡೆಯಬಹುದಾದ ವಾತಾವರಣವಿದೆ ಎನ್ನುತ್ತಾರೆ ಈ ಕ್ಷೇತ್ರದ ವೀಕ್ಷಕರು. ಹಳೆಯ ದಿಗ್ಗಜ ಕಂಪನಿಗಳು ತಮ್ಮ ಹಳೆ ವ್ಯವಹಾರ ಸರಿ ಮಾಡಿಕೊಂಡು ಹಳಿಗೆ ಬರುವುದಕ್ಕೇ ಸಮಯ ಹಿಡಿಯುತ್ತಾದ್ದರಿಂದ ಈ ಲೀಸ್ ಕಂಪನಿಗಳು ಹೊಸ ಗ್ರಾಹಕರನ್ನು ಉತ್ಸುಕತೆಯಿಂದ ಸೆಳೆಯುತ್ತಿವೆ. 

ಅಲ್ಲದೇ ಎಷ್ಟೋ ಮಂದಿ ಪೈಲಟ್ ಗಳು, ವಿಮಾನಯಾನ ಸಿಬ್ಬಂದಿ ಇನ್ನೂ ಅನಿಶ್ಚಿತತೆಯಲ್ಲಿದ್ದಾರೆ. ಅವರನ್ನು ಹೊಸ ಉದ್ಯೋಗಕ್ಕೆ ಸೆಳೆದುಕೊಳ್ಳುವುದೂ ಈ ಹಂತದಲ್ಲಿ ಸುಲಭ. 

ಲೋ ಕಾಸ್ಟ್ ಮಂತ್ರ

ಜುಂಜನವಾಲಾ ಹೂಡಿಕೆ ಬಲದಲ್ಲಿ ತಲೆ ಎತ್ತಲಿರುವ ಹೊಸ ವಿಮಾನಯಾನ ಕಂಪನಿ ತನ್ನನ್ನು ಯುಎಲ್ ಸಿಸಿ (ಅಲ್ಟ್ರಾ ಲೊ ಕಾಸ್ಟ್ ಕ್ಯಾರಿಯರ್) ಅಂತ ಗುರುತಿಸಿಕೊಳ್ಳುತ್ತಿದೆ. ಅಂದರೆ ಲಕ್ಸುರಿಯ ಭಾವನೆಯಿಂದ ಪ್ರಯಾಣಿಸುವವರಿಗಿಂತ, ಒಂದು ಕಡೆಯಿಂದ ಇನ್ನೊಂದು ಕಡೆ ಹೇಗೋ ತುರ್ತಾಗಿ ಮುಟ್ಟಿಕೊಳ್ಳಬೇಕು ಎಂಬ ಜನವರ್ಗಕ್ಕೆ ರೂಪಿಸಿರುವ ಮಾದರಿ ಇದು. ಏರ್ ಡೆಕ್ಕನ್ ಇತ್ಯಾದಿ ಲೋ ಕಾಸ್ಟ್ ಆಗಿದ್ದವು. ಆದರೆ ಈಗ ಬರಲಿರುವುದು ಮತ್ತೂ ಕಡಿಮೆ ವೆಚ್ಚದ ಸಾಗಣೆ ಮಾದರಿ. ಅಂದರೆ ಇಲ್ಲಿ ಎಷ್ಟು ಸೀಟು ತುಂಬಿಸಲು ಸಾಧ್ಯವೋ ಮುಲಾಜಿಲ್ಲದೇ ತುಂಬಿಸಲಾಗುತ್ತದೆ. ಅಗತ್ಯ ಬಿದ್ದರೆ ಸೀಟುಗಳನ್ನು ಒಂದುಮಟ್ಟದ ಬ್ಯಾಗೇಜ್ ಇಟ್ಟುಕೊಳ್ಳುವುದಕ್ಕೂ ಮಾರಲಾಗುತ್ತದೆ. ಕಾಂಪ್ಲಿಮೆಂಟರಿ ಅಂತೆಲ್ಲ ಏನಿರುವುದಿಲ್ಲ. ಬ್ಯಾಗಿನ ಸ್ಟಿಕ್ಕರಿನಿಂದ ಹಿಡಿದು, ಹೆಚ್ಚಿನ ದುಡ್ಡು ತೆತ್ತು ತರಿಸಿಕೊಳ್ಳುವ ಕಾಫಿ ಕಪ್ಪಿನವರೆಗೆ ಎಲ್ಲದರಲ್ಲೂ ಜಾಹೀರಾತುಗಳಿರುತ್ತವೆ. ಒಟ್ಟಿನಲ್ಲಿ ವೆಚ್ಚ ತಗ್ಗಿಸಿ, ಹಣ ಪಡೆಯುವ ಎಲ್ಲ ಮಾರ್ಗವನ್ನೂ ಅನುಸರಿಸಲಾಗುತ್ತದೆ.

ಭಾರತದಲ್ಲಿ ತೆರೆಯುತ್ತಿವೆ ಹೊಸಮಾರ್ಗಗಳು

ಮೋದಿ ಸರ್ಕಾರ ಉಡಾನ್ ಥರದ ಯೋಜನೆಗಳನ್ನು ಕೈಗೆತ್ತಿಕೊಂಡು ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ವಿಸ್ತರಿಸುತ್ತಲೇ ಇದೆ. ಸಣ್ಣ ಸಣ್ಣ ನಗರಗಳಲ್ಲಿ ವಿಮಾನನಿಲ್ದಾಣ ನಿರ್ಮಿಸುವ, ಹಳೆಯ ವಿಮಾನನಿಲ್ದಾಣಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಗಳೆಲ್ಲ ಅತಿವೇಗದಿಂದಾಗಿವೆ ಹಾಗೂ ಇನ್ನೂ ಮುಂದುವರಿಯುತ್ತಿವೆ. ಇದು ಹೊಸ ಆಟಗಾರರಿಗೆ ಹೊಸ ಜಾಗವನ್ನೇ ಸೃಷ್ಟಿಸಿದೆ. 

ತೀರ ಕಳೆದುಕೊಳ್ಳೋದಕ್ಕೇನಿದೆ?

ಜುಂಜನವಾಲಾ ಈ ಸಾಹಸಕ್ಕೆ ಹೂಡುತ್ತಿರುವುದು ಸುಮಾರು 260 ಕೋಟಿ ರುಪಾಯಿಗಳು. ಅವರ ಜಾಗದಲ್ಲಿ ನಿಂತು ಯೋಚಿಸಿದರೆ, ಇದನ್ನು ಕಳೆದುಕೊಂಡರೂ ಅವರ ಅಪಾರ ಸಂಪತ್ತಿನಲ್ಲಿ ಒಂದು ಕೊಡ ನೀರು ಎತ್ತಿ ಚೆಲ್ಲಿದಂತೆ. ಆದರೆ ಯಶಸ್ಸಾದರೆ ಈಗಿರುವ ಆಟಗಾರರನ್ನೆಲ್ಲ ಹೊಡೆದು ಹೊಸ ಆಟ ಕಟ್ಟಿದ ಶ್ರೇಯಸ್ಸು ಮತ್ತು ಲಾಭಗಳೆಲ್ಲ ಸಿಗುತ್ತವೆ. ಇಟ್ಸ್ ಸಿಂಪ್ಲಿ ಅ ರಿಸ್ಕ್ ವರ್ತ್ ಟೇಕಿಂಗ್. 

ಬಿಸಿನೆಸ್ ಕಾರ್ಯತಂತ್ರಗಳು ಕೆಲವೊಮ್ಮೆ ರಾಜಕೀಯ ಕತೆಗಳಿಗಿಂತ ರೋಚಕವಾಗಿರುತ್ತವೆ. ಏನಂತೀರಾ?

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss