Thursday, August 11, 2022

Latest Posts

ಉತ್ತರ ಕೊರಿಯಾದಿಂದ ದೂರಗಾಮಿ ಕ್ರೂಸ್ ಕ್ಷಿಪಣಿ ಪ್ರಯೋಗ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಉತ್ತರ ಕೊರಿಯಾವು ದೂರಗಾಮಿ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ.
ಅಮೆರಿಕ ವಿರುದ್ಧ ದೀರ್ಘಕಾಲದಿಂದ ಸಂಘರ್ಷದಲ್ಲಿರುವ ಉತ್ತರ ಕೊರಿಯಾಗೆ ತನ್ನ ಅಣ್ವಸ್ತ್ರ ಬಲ ಹೆಚ್ಚಿಸಿಕೊಳ್ಳಬೇಕಿತ್ತು. ಅದೇ ಭಾಗವಾಗಿ ಈ ಕ್ಷಿಪಣಿ ಪ್ರಯೋಗ ನಡೆಸಿ ಯಶಸ್ಸು ಗಳಿಸಿದೆ. ಕ್ಷಿಪಣಿ ಪರೀಕ್ಷೆಯೊಂದಿಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಮತ್ತು ಭಾನುವಾರದ ನಡುವೆ ನಡೆಸಿರುವ ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆ ಜಗತ್ತಿಗೆ ಸಡ್ಡು ಹೊಡೆದಿದೆ. ಈ ದೂರಗಾಮಿ ಕ್ರೂಸ್ ಕ್ಷಿಪಣಿಗಳು 1,500 ಕಿ.ಮೀ ದೂರದ ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು. ಜಾಗತಿಕ ಮಟ್ಟದ ನಿರ್ಬಂಧ ಹಾಗೂ ತೀವ್ರ ಒತ್ತಡದ ನಡುವೆಯೂ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸುತ್ತಲೇ ಬಂದಿರುವ ಉತ್ತರ ಕೊರಿಯಾ, ರಕ್ಷಣಾ ವಲಯದಲ್ಲಿ ಬಲವೃದ್ಧಿಸಿಕೊಳ್ಳುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss