ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಳ್ಳಿಯ ಸ್ವಯಂ ಸೇವಕರ ಜೊತೆಗೂಡಿ 160 ಕಿ.ಮೀ ಉದ್ದದ ನದಿ ಶುಚಿಗೊಳಿಸಿದ ಬಲ್ಬೀರ್ ಸಿಂಗ್!

ಸಮುದ್ರ,ಕೆರೆ,ಹೊಂಡ,ಹಳ್ಳ,ನದಿ ಹಾಗೂ ಜಲಪಾತ ಕೇಳೋಕೆ ಎಷ್ಟು ಖುಷಿ ಅಲ್ವಾ?
ಪಿಕ್‌ನಿಕ್ ಅಥವಾ ಟ್ರಿಪ್ ಮಾಡೋದಕ್ಕು ಆದಷ್ಟು ನೀರಿರುವ ಜಾಗವನ್ನೇ ಹುಡುಕುತ್ತೀವಿ. ಮಕ್ಕಳಿಗೆ ಸ್ನಾಕ್ಸ್ ಎಲ್ಲಿ ಹೋದರೂ ಬೇಕು ಎಂದು ಬ್ಯಾಗ್ ತುಂಬಾ ಬಿಸ್ಕೆಟ್,ಚಿಪ್ಸ್,ಜ್ಯೂಸ್ ತಂದಿರುತ್ತೀರಿ. ಮಕ್ಕಳು ಎಲ್ಲಿ ಕೇಳಿದರೂ ಅಲ್ಲಿಯೇ ತೆಗೆದುಕೊಡುತ್ತೀರಿ. ಮಕ್ಕಳು ತಿಂದ ಕವರ್‌ನ ಸೀದ ನದಿಗೆ ಎಸೆಯುತ್ತಾರೆ. ಮಕ್ಕಳಷ್ಟೇ ಅಲ್ಲ ಜವಾಬ್ದಾರಿ ಇಲ್ಲದ ದೊಡ್ಡವರೂ ಈ ಕೆಲಸವನ್ನು ಮಾಡುತ್ತಾರೆ. ಗಬ್ಬೆಬ್ಬಿಸೋಕೆ ಗಬ್ಬೇ ಇಲ್ಲದ ಜಾಗವನ್ನು ಹುಡುಕಿ ಹೋಗುತ್ತೇವೆ. ಅಲ್ಲಿ ಆದಷ್ಟು ಕಸ ಹಾಕಿ ಮನೆಗೆ ಬಂದು ಮನೆಯೆಲ್ಲ ಧೂಳಾಗಿದೆ ಅಂತ ತಿಕ್ಕಿ ತೊಳಿತೇವೆ. ಆದರೆ ಅಲ್ಲಿ ನಾವು ಮಾಡಿಬಂದ ಗಲೀಜಿನ ಬಗ್ಗೆ ಸ್ವಲ್ಪವೂ ಗಿಲ್ಟ್ ಇರೋದಿಲ್ಲ..

ಇಂಥವರ ಮಧ್ಯೆ ವಿಭಿನ್ನವಾಗಿ ನಿಂತ ವ್ಯಕ್ತಿಯೊಬ್ಬರಿದ್ದಾರೆ. ಯಾರೋ ಮಾಡಿದ ಗಲೀಜನ್ನು ಇವರು ಹಾಗೂ ಇವರ ಸಂಘ ಕ್ಲೀನ್ ಮಾಡಿದೆ. ಇವರ ಸ್ಟೋರಿ ಏನು ನೋಡೋಣ ಬನ್ನಿ..

Meet Eco Baba, the Man Who Cleaned a 160 Km Long River with Sheer Grit and Helpful Volunteersಪಂಜಾಬ್‌ನ ಬಲ್ಬೀರ್ ಸಿಂಗ್ ಸೀಚೇವಾಲ್ ಹೆಸರು ಕೇಳಿದ್ದೀರಾ? ಇವರನ್ನು ಎಕೋ ಬಾಬಾ ಎಂದು ಎಲ್ಲರೂ ಕರೆಯುತ್ತಾರೆ. ಕಾಳಿ ಬೇನ್ ನದಿ ಕಾರ್ಖಾನೆಗಳ ವೇಸ್ಟ್ ಹಾಗೂ ಕಸಕಡ್ಡಿಯಿಂದ ತುಂಬಿತ್ತು. ತನ್ನದೇ ಊರಿನ ನದಿ ಈ ರೀತಿ ಹಾಳಾಗುತ್ತಿರುವುದನ್ನು ಬಲ್ಬೀರ್‌ಗೆ ನೋಡಲಾಗಲಿಲ್ಲ. ಹಾಗಾಗಿ 160 ಮೀಟರ್ ಉದ್ದದ ನದಿಯನ್ನು ಕ್ಲೀನ್ ಮಾಡಬೇಕು ಎಂದು ಮನಸು ಮಾಡಿ ಅದನ್ನು ಸಾಧಿಸಿದ್ದಾರೆ.

ಗ್ರಾಮಸ್ಥರಿಗೆ ಪಾಠ
ಬಲ್ಬೀರ್ ಒಬ್ಬರಿಗೇ ಇದು ಸಾಧ್ಯವಿಲ್ಲ. ಇವರ ಜೊತೆ ಸಮಾನ ಮನಸ್ಕರು ಬೇಕೇಬೇಕು. ಹಳ್ಳಿಯ ಜನರಿಗೆ ನದಿಯನ್ನು ಕ್ಲೀನ್‌ಮಾಡುವುದು ಏಕೆ ಮುಖ್ಯ ಅನ್ನೋ ಮಾಹಿತಿ ನೀಡಿದರು. ಕೆಲವು ಸ್ವಯಂ ಸೇವಕರನ್ನು ಕಲೆಹಾಕಿದರು. ಜೊತೆಗೆ ಕ್ಲೀನ್ ಮಾಡಲು ಬೇಕಾದ ಉಪಕರಣಗಳನ್ನು ಖರೀದಿ ಮಾಡಲು ದೇಣಿಗೆ ಪಡೆದರು.

ಟೀಂ ವರ್ಕ್
ಬಲ್ಬೀರ್ ಟೀಂ 24 ಹಳ್ಳಿಗಳಲ್ಲಿ ಸುತ್ತಿ ಹಣ ಸಂಗ್ರಹಿಸಿ, ಕ್ಲೀನ್ ಮಾಡಲು ಬೇಕಾದ ಉಪಕರಣಗಳನ್ನು ತಂದು ಇಟ್ಟುಕೊಂಡರು. ಟೀಂನ ಸಹಾಯದಿಂದ ನದಿಯನ್ನು ಕ್ಲೀನ್ ಮಾಡಿದರು. ನದಿಯಷ್ಟೇ ಅಲ್ಲ, ನದಿಯ ಸುತ್ತಮುತ್ತ ಪ್ರದೇಶಗಳನ್ನು ಕ್ಲೀನ್ ಮಾಡಿ, ಪೇಂಟ್ ಬಳಸಿ ಸುಂದರಗೊಳಿಸಿದರು.

ecobaba1ಮತ್ತೆ ಕಸ ಹಾಕಿದರೆ?
ಇಷ್ಟೆಲ್ಲಾ ಶ್ರಮಪಟ್ಟು ಮಾಡಿದ್ದ ಕೆಲಸಕ್ಕೆ ಕಲ್ಲು ಹಾಕೋದು ತುಂಬಾನೇ ಸುಲಭ. ಮತ್ತೆ ಯಾರಾದರೂ ಕಸ ಸುರಿದರೆ ನದಿ ಕಥೆ ಅದೇ ಆಗಿಹೋಗುತ್ತದೆ. ಅದಕ್ಕಾಗಿ ಬಲ್ಬೀರ್ ಹಳ್ಳಿಗರಿಗೆ ಕಸ ಏಕೆ ಹಾಕಬಾರದು ಎಂದು ತಿಳಿಸಿದರು. ಈ ಮಾತಿಗೆ ಹಳ್ಳಿಗರೂ ಬೆಲೆ ಕೊಟ್ಟರು.

ecobaba4ಸೀವೇಜ್ ಸಿಸ್ಟಮ್
ಪಂಜಾಬ್ ಸರ್ಕಾರದ ಸಹಾಯದಿಂದ ಬಲ್ಬೀರ್ ಅಂಡರ್‌ಗ್ರೌಂಡ್ ಸೀವೇಜ್ ಸಿಸ್ಟಮ್ ಮಾಡಿದರು. ಇದು ಅತಿ ಕಡಿಮೆ ಹಣದಲ್ಲಿ ಮಾಡಬಹುದಾದ ಸಿಸ್ಟಮ್. ನ್ಯಾಚುರಲ್ ಆದ ದಾರಿ ಆರಿಸಿದ ಬಲ್ಬೀರ್ ಇರಿಗೇಶನ್‌ಗೆ ಈ ನೀರನ್ನು ಬಳಸುವಂತೆ ಮಾಡಿದರು.

ecobaba3ಮುಂದೇನು?
ಬಲ್ಬೀರ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಸಿಗುತ್ತಿದ್ದು, ಈಗಾಗಲ ಬಲ್ಬೀರ್ ಶಾಲೆ, ಕಾಲೇಜುಗಳನ್ನು ಆರಂಭಿಸಿದ್ದಾರೆ. ಸೀವೇಜ್‌ನಲ್ಲಿ ಕಲ್ಲು,ಗ್ಲಾಸ್ ಹಾಗೂ ಪ್ಲಾಸ್ಟಿಕ್‌ನಂತಹ ವಸ್ತಗಳು ನದಿಗೆ ಸೇರದಂತೆ ಗಮನ ಹರಿಸಿದ್ದಾರೆ.

ನೀವು 160 ಕಿ.ಮೀ ಉದ್ದದ ಕೆರೆ ಕ್ಲೀನ್ ಮಾಡುವುದು ಬೇಡ. ಆದರೆ ಗಲೀಜು ಮಾಡಬೇಡಿ. ಎಲ್ಲದಕ್ಕೂ ನಿಮ್ಮ ಜವಾಬ್ದಾರಿ ಇದ್ದದ್ದೆ. ಹೆಚ್ಚೇನಿಲ್ಲ ಸ್ವಲ್ಪ ಜಾಗರೂಕರಾಗೋಣ ಅಷ್ಟೆ!

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss