ಹೊಸದಿಗಂತ ಆನ್ಲೈನ್ ಡೆಸ್ಕ್:
ಬಾಲಿವುಡ್ ನಟಿ ಕರೀನಾ ಕಪೂರ್ ಈಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಸೈಫ್-ಕರೀನಾ ಮಗುವಿನ ಮುಖವನ್ನು ಈಗಲೇ ತೋರಿಸೋದಿಲ್ಲ ಎಂದು ಹೇಳಿದ್ರು. ಆದರೆ ಇದೀಗ ತೈಮುರ್ನ ತಮ್ಮನ ಫೇಸ್ ರಿವೀಲ್ ಆಗಿದೆ.
ತೈಮುರ್ನ ತಾತ ರಣಧೀರ್ ಕಪೂರ್ ತಿಳಿಯದೆ ತೈಮುರ್ ಹಾಗೂ ಎರಡನೇ ಮಗುವಿನ ಫೋಟೊ ಕೊಲ್ಯಾಜ್ ಮಾಡಿ ಇನ್ಸ್ಟಾಗ್ರಾಂಗೆ ಹಾಕಿದ್ದಾರೆ.
ಆದರೆ ತಕ್ಷಣವೇ ಅವರು ಫೋಟೊ ಡಿಲೀಟ್ ಮಾಡಿದ್ದಾರೆ. ಇನ್ನೂ ಮಗುವಿನ ಹೆಸರನ್ನು ಬೇಬೋ ಸೈಫ್ ರಿವೀಲ್ ಮಾಡಿಲ್ಲ.