ಹೊಸದಿಗಂತ ವರದಿ,ಮಂಗಳೂರು:
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಸತತವಾಗಿ ಜಾಗೃತಿ ಕಾರ್ಯಕ್ರಮಗಳಾದರೂ ಮಂಗಳೂರಿನ ಸಿಕ್ಕ ಸಿಕ್ಕಲ್ಲಿ ತ್ಯಾಜ್ಯ ಎಸೆಯುವುದು ಮಾತ್ರ ನಿಂತಿಲ್ಲ.
ರಸ್ತೆ ಬದಿ, ನದಿ ಹೀಗೆ ಸಿಕ್ಕ ಸಿಕ್ಕಲ್ಲಿ ಜನ ಕಸ ಎಸೆಯುತ್ತಿದ್ದಾರೆ. ಉಳ್ಳಾಲದ ನೇತ್ರಾವತಿ ನದಿಗೂ ನಿತ್ಯ ರಾಶಿ ರಾಶಿ ಕಸ ಎಸೆಯಲಾಗುತ್ತಿದೆ. ವಿದ್ಯಾವಂತ ಜನತೆಯೇ ಕಾರಿನಲ್ಲಿ ತಮ್ಮ ಮನೆಯ ತ್ಯಾಜ್ಯವನ್ನು ಜೀವನದಿ ನೇತ್ರಾವತಿ ನದಿಯ ಒಡಲಲ್ಲಿ ಹಾಕುತ್ತಿದ್ದಾರೆ. ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ನಗರದ ಪ್ರಜ್ಞಾವಂತ ನಾಗರಿಕರೊಂದ ಕೇಳಿ ಬರುತ್ತಿದೆ.
ಕಾರಿನಲ್ಲಿ ಬಂದು ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯುವ ವೀಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರ ವಿರುದ್ಧ ಕ್ರಮವಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.