ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್, ಫೇಸ್ ಬುಕ್ ಅಂತ ಆರಂಭವಾದ ಬಳಿಕ ಅನಗತ್ಯ ಫೋಟೋ, ವಿಡಿಯೋಗಳು ನಿಮ್ಮ ಮೊಬೈಲ್ ನಲ್ಲಿ ತುಂಬಿ ಹೋಗಿರುತ್ತದೆ. ನಿಮ್ಮ ಮೊಬೈಲ್ ಸ್ಟೋರೇಜ್ ಉಳಿಸೋದು ಹೇಗೆ?
ಅನಗತ್ಯ ಆಪ್ ಡಿಲೀಟ್: ತುಂಬಾ ದಿನದಿಂದ ಬಳಸದೆ ಇರುವ ಆಪ್ ಗಳನ್ನು ಮುಲಾಜಿಲ್ಲದೆ ಡಿಲೀಟ್ ಮಾಡಿಬಿಡಿ.
ಹಳೇ ಮೆಸೇಜ್: ನಿಮ್ಮ ಮೊಬೈಲ್ ನಲ್ಲಿ ಸೇವ್ ಆಗಿರುವ ಹಳೆ ಮೆಸೇಜ್ ಗಳನ್ನು ಆಟೋ ಡಿಲೀಟ್ ಮಾಡಿಬಿಡಿ.
ಕ್ಯಾಚಿ: ಸೆಟ್ಟಿಂಗ್ಸ್ ನಲ್ಲಿರುವ ಇಂಟರ್ನಲ್ ಸ್ಟೋರೇಜ್ ನಲ್ಲಿನ ಕ್ಯಾಚಿ ಡೇಟಾಗಳನ್ನು ಡಿಲೀಟ್ ಮಾಡುವುದರಿಂದ ಸ್ಟೋರೇಜ್ ಉಳಿಯುತ್ತದೆ.
ಡೌನ್ ಲೋಡ್ಸ್ ಡಿಲೀಟ್ ಮಾಡಿ: ಅನಗತ್ಯ ಫೋಟೋ, ವಿಡಿಯೋ ಹಾಗೂ ದಾಖಲೆಗಳನ್ನು ಡಿಲೀಟ್ ಮಾಡಿ.
ಗೂಗಲ್ ಫೋಟೋ: ನಿಮ್ಮ ಮೊಬೈಲ್ ಸ್ಟೋರೇಜ್ ಉಳಿಸಿಕೊಳ್ಳಲು ನಿಮ್ಮ ಗೂಗಲ್ ಡ್ರೈವ್ ಗೆ ಸಿಂಕ್ ಮಾಡಿಬಿಡಿ.
ಮೆಮೊರಿ ಕಾರ್ಡ್: ಮೊಬೈಲ್ ನಲ್ಲಿ ಸ್ಟೋರೇಜ್ ತುಂಬಿ ಹೋಗಿದ್ದರೆ ನಿಮ್ಮ ಇಂಟರ್ನನಲ್ ಸ್ಟೋರೇಜ್ ನಲ್ಲಿರುವ ಫೋಟೋ, ವಿಡಿಯೋಗಳನ್ನು ಅದಕ್ಕೆ ಮೂವ್ ಮಾಡಿ.