Saturday, August 13, 2022

Latest Posts

ಏಕದಿನದ ಕಿರೀಟ ಕಳೆದುಕೊಂಡ ಕೊಹ್ಲಿ: ಅಗ್ರಪಟ್ಟಕ್ಕೇರಿದ ಬಾಬರ್ ಅಜಮ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಏಕದಿನದ ಅಗ್ರಪಟ್ಟದ ಕಿರೀಟ ಕಳೆದುಕೊಂಡಿದ್ದು, ಅವರ ಸ್ಥಾನವನ್ನು ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್ ಅಜಮ್ ತುಂಬಿದ್ದಾರೆ.
ಇಂದು ಪುರುಷರ ಏಕದಿನ ಕ್ರಿಕೆಟ್​ನ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಬಾಬರ್ ನಂಬರ್​ ಒನ್​ ಸ್ಥಾನಕ್ಕೇರುವ ಮೂಲಕ ಇತಿಹಾಸ ಬರೆದಿದ್ದಾರೆ.
ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ಕಳಪೆ ಪ್ರದರ್ಶನ ಕಂಡಿದ್ದರು. ಇದರಿಂದ ಕೊಹ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಇದೀಗ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪಾಕ್​ ತಂಡದ ನಾಯಕ ಬಾಬರ್ ಅಜಮ್ ಉತ್ತಮ ಪ್ರದರ್ಶನ ತೋರಿ ಕೊಹ್ಲಿ ಹಿಂದಿಕ್ಕುವ ಮೂಲಕ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು 2017 ಆಗಸ್ಟ್​ನಿಂದ ಇಂದಿನವರೆಗೆ ಅಂದರೆ ಒಟ್ಟು 1258 ದಿನಗಳ ಕಾಲ ಪ್ರಥಮ ಸ್ಥಾನದಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss