Tuesday, June 28, 2022

Latest Posts

ಹೊಸಪೇಟೆ ನಗರಸಭೆಯಲ್ಲಿ ಕಮಲ ಅರಳಲಿದೆ: ಸಚಿವ ಆನಂದ್ ಸಿಂಗ್ ವಿಶ್ವಾಸ

ಹೊಸದಿಗಂತ ವರದಿ, ವಿಜಯನಗರ:

ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದ್ದು, ನಗರಸಭೆಯಲ್ಲಿ ಕಮಲ ಅರಳಲಿದೆ, ಇದರಲ್ಲಿ ಅನುಮಾನ ಬೇಡ ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು‌ ವಿಶ್ವಾಸ ವ್ಯಕ್ತಪಡಿಸಿದರು.
ಹೊಸಪೇಟೆ ‌ನಗರದಲ್ಲಿ ಸೋಮವಾರ ನಗರದ 5ನೇ ವಾರ್ಡ್‌ ಪ್ರದೇಶದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ, ಮತಯಾಚನೆ ವೇಳೆ ತೆರಳಿದ ಎಲ್ಲ ಕಡೆಗಳಲ್ಲೂ ‌ಬಿಜೆಪಿಗೆ ಉತ್ತಮ ವಾತಾವರಣವಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ‌ಪಡೆಯುವ ವಿಶ್ವಾಸವಿದೆ, ನಗರಸಭೆಯಲ್ಲಿ ಕಮಲ ಅರಳಲಿದೆ, ಇದರಲ್ಲಿ‌ ಅನುಮಾನಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾನ ಪ್ರತಿಯೋಬ್ಬರ ಹಕ್ಕು, ಚುನಾವಣೆಯಲ್ಲಿ ‌ಪ್ರತಿಯೋಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು‌ ಮನವಿ ‌ಮಾಡಿದರು‌. ಸಚಿವರು ಕುಟುಂಬ ಸಮೇತ ಮತದಾನ ಮಾಡಿದ ಬಳಿಕ ಮತಗಟ್ಟೆ ಕೇಂದ್ರದ ಎದುರು ಗೆಲುವಿನ‌ ನಗೆ ಬೀರಿ ಗಮನಸೆಳೆದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ, ಮೂಲಾಜಿಯೂ ಇಲ್ಲ, ಅಭಿವೃದ್ಧಿಯೇ ನನ್ನ ಮೂಲ ಮಂತ್ರ, ಕ್ಷೇತ್ರದ ಜನರಿಗೆ‌ ನೀಡಿದ ಭರವಸೆಯಂತೆ ಅವದಿಯಲ್ಲಿ ವಿಜಯನಗರ ಕ್ಷೇತ್ರ ಅಭಿವೃದ್ದಿಯಲ್ಲಿ ರಾಜ್ಯದಲ್ಲೇ ಮಾದರಿಯಾಗಲಿದೆ. ವಿಶ್ವಪ್ರಸಿದ್ಧ ಹಂಪಿ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು, ಕೇಂದ್ರ ಹಾಗೂ ರಾಜ್ಯದಲ್ಲಿ ‌ನಮ್ಮ ಸರ್ಕಾರವೇ ಇದ್ದು, ಅನುದಾನದ ಕೊರತೆಯಾಗೋಲ್ಲ ಎಂದರು. ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಾಯಿ ‌ಅವರ ಬದಲಾವಣೆ ಸುದ್ದಿ ಕೇವಲ ವದಂತಿ ಅಷ್ಟೇ, ಇದು ಅಕ್ಷರಸಃ ಸುಳ್ಳು‌ಸುದ್ದಿ, ಇದಕ್ಕೆ ಹೆಚ್ಚು ‌ಮಹತ್ವ‌ ನೀಡುವುದು ಬೇಡ, ಬೊಮ್ಮಾಯಿ ‌ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ, ಕೆಲವರು ಈ ರೀತಿ ಸುಳ್ಳು ಸುದ್ದಿ‌ ಹರಡಿಸುತ್ತಿದ್ದಾರೆ, ಇದಕ್ಕೆ ಹೆಚ್ಚು ಮಹತ್ವ ನೀಡುವುದು ‌ಬೇಡ ಎಂದು ‌ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ್ ನಾಲತ್ವಾಡ್, ಸಂದೀಪ್ ಸಿಂಗ್, ಮುನ್ನಾ ಭಾಯಿ ಸೇರಿದಂತೆ ಇತರರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss