Wednesday, July 6, 2022

Latest Posts

ಹೂವುಗಳೆಲ್ಲ ಬಾಡಿದ ದಿನ ನನ್ನ ಪ್ರೀತಿ ಕೂಡ ಸಾಯುತ್ತದೆ ಎಂದು ಗಂಡ ಹೇಳಿದ್ದೇಕೆ?

ಗಂಡ ಫಾರೀನ್ ಟ್ರಿಪ್‌ನಲ್ಲಿದ್ದ. ಈಗಿನ್ನೂ ಮದುವೆಯಾಗಿದ್ದ ಹೆಂಡತಿಯನ್ನು ಬಿಟ್ಟು ಹೋಗೋದು ಅವನಿಗೂ ಕಷ್ಟವಾಗಿತ್ತು. ಸಿನವೂ ಅವಳಿಗೆ ಕಾಲ್, ಮೆಸೇಜ್ ಮಾಡುತ್ತಲೇ ಇದ್ದ.
ಒಂದು ದಿನ ಅವಳಿಗೆ 11  ಹೂವುಗಳಿರುವ ಬೊಕ್ಕೆ ಗಿಫ್ಟ್ ಬಂತು.
ಅದನ್ನು ಕಂಡು ಅವಳಿಗೆ ಸಿಕ್ಕಾಪಟ್ಟೆ ಖುಷಿಯಾಯ್ತು. ಅದರ ನಡುವೆ ಪುಟ್ಟದೊಂದು ನೋಟ್ ಇತ್ತು.
ಅದರಲ್ಲಿ ಈ ಬೊಕ್ಕೆಯಲ್ಲಿ ‘ಎಲ್ಲ ಹೂವುಗಳು ಜೀವಂತವಾಗಿರೋ ವರೆಗೂ ನಿನ್ನ ಮೇಲೆ ನನ್ನ ಪ್ರೀತಿಯೂ ಜೀವಂತವಾಗಿರುತ್ತದೆ’ ಎಂದು ಬರೆದಿತ್ತು.

ಈ ನೋಟ್ ಆಕೆಗೆ ಸ್ವಲ್ಪ ಗಲಿಬಿಲಿ ಮಾಡಿತ್ತು. ಹೂವುಗಳು ಅಂದಮೇಲೆ ಬಾಡಿ, ಸತ್ತುಹೋಗೋದು ಮಾಮೂಲಿ. ಆದರೆ ಕಡೆಯ ಹೂವು ಸತ್ತ ನಂತರ ಪ್ರೀತಿ ಕೂಡ ಸಾಯುತ್ತದೆ ಎಂದು ಗಂಡ ಬರೆದಿದ್ದಾನೆ. ಇದರರ್ಥ ಏನು ಎಂದು ತಲೆಕೆಡಿಸಿಕೊಂಡಳು.
ಗಂಡನ ಬ್ಯುಸಿನೆಸ್ ಟ್ರಿಪ್ ಇದಾಗಿದ್ದು, ಆತ ಮಾತಿಗೇ ಸಿಗುತ್ತಿರಲಿಲ್ಲ. ಬರೀ ಯೋಗಕ್ಷೇಮ ವಿಚಾರಿಸುವಷ್ಟೇ ಸಮಯ ಉಳಿಯುತ್ತಿತ್ತು.

ಹೆಂಡತಿ ಹೂವನ್ನು ನೀರಿನ ಜಾರ್‌ನಲ್ಲಿ ಹಾಕಿಟ್ಟಳು. ಆದಷ್ಟು ಹೆಚ್ಚು ದಿನ ಅದನ್ನು ಜೀವಂತವಾಗಿ ಇಡುತ್ತೇನೆ ಎಂದು ಶಪಥ ಮಾಡಿದಳು. ಆದರೆ ದಿನ ಕಳೆದಂತೆ ಹೂವುಗಳ ಅಂದ ಕಳೆಗಟ್ಟಿತು. ದಳಗಳೆಲ್ಲ ಉದುರಿ ಹೂವುಗಳು ಸತ್ತು ಹೋದವು. ಆದರೆ ಒಂದು ಹೂವು ಮಾತ್ರ ಬಂದ ದಿನ ಹೇಗಿತ್ತೋ ಅದೇ ರೀತಿ ಇತ್ತು. ಹತ್ತಿರ ಹೋಗಿ ನೋಡಿದಾಗ ತಿಳಿಯಿತು ಅದು ಆರ್ಟಿಫಿಶಿಯಲ್ ಹೂವು, ಶಾಶ್ವತವಾಗಿ ಬಾಡದೇ ಇರುವಂಥದ್ದು.

ಹಣ, ಆಸ್ತಿ ಅಂತಸ್ತು ಎಲ್ಲವೂ ಬೇಕು. ಆದರೆ ಪ್ರೀತಿಗಿಂತ ಅಲ್ಲ, ಪ್ರೀತಿಸುವ ಪತಿ ಜೊತೆಗಿದ್ದರೆ ಬೇರೇನನ್ನೂ ಅಪೇಕ್ಷೆ ಪಡಬೇಡಿ. ಎಷ್ಟೋ ಹೆಂಡತಿಯರ ದೇಹ ಚಿನ್ನಾಭರಣಗಳಿಂದಲೇ ಮುಚ್ಚಿರುತ್ತದೆ. ಆದರೆ ಮನಸ್ಸು ಮಾತ್ರ ಪ್ರೀತಿಯಿಲ್ಲದೆ ಖಾಲಿಯಾಗಿರುತ್ತದೆ. ಪ್ರೀತಿ ಎಲ್ಲದಕ್ಕಿಂತ ದೊಡ್ಡದು ನೆನಪಿರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss