SHOCKING | ಇನ್‌ಸ್ಟ್ರಾಗ್ರಾಮ್‌ನಲ್ಲಿ ಲವ್ ಜಿಹಾದ್: ಕುಷ್ಟಗಿಯಲ್ಲೊಂದು ಶಾಕಿಂಗ್ ಘಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣವಾದ ಇನ್‌ಸ್ಟ್ರಾಗ್ರಾಮ್‌ನಲ್ಲಿ ಪರಿಚಯಗೊಂಡ ಹೈದರಾಬಾದ್ ಮೂಲದ ಮುಸ್ಲಿಂ ಯುವಕ ಹಾಗೂ ಕುಷ್ಟಗಿ ಹಿಂದೂ ಯುವತಿ ಪ್ರೇಮ ಪ್ರಕರಣ ಮದುವೆ ಆಗುವುದರೊಂದಿಗೆ ಹೊಸ ತಿರುವು ಪಡೆದುಕೊಂಡಿರುವ ಘಟನೆ ಶನಿವಾರ ನಡೆದಿದೆ.

ಡಿಸೆಂಬರ್ 12ರಂದು ಕುಷ್ಟಗಿ ಪಟ್ಟಣ ನಿವಾಸಿಯಾಗಿದ್ದ ಅಂಜನಾ (22) (ಹೆಸರು ಬದಲಾಯಿಸಿದ್ದು) ನಾಪತ್ತೆ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು ಯಶಸ್ವಿಯಾದ ಪೊಲೀಸರು ಹೈದರಾಬಾದ್ ಮೂಲದ ಶೇಕ್ ವಾಹಿದ್ ಎಂಬ ಇಂಜಿನಿಯರ್ ವಿದ್ಯಾರ್ಥಿಯೊಂದಿಗೆ ಕುಷ್ಟಗಿಯ ಯುವತಿಯು ಕಳೆದ ನಾಲ್ಕು ವರ್ಷಗಳಿಂದ ಹುಡುಗನ ಜೊತೆ ಸಂಪರ್ಕ ಹೊಂದಿದ್ದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸಲಾಗಿ ಯುವತಿಯು ಡಿಸೆಂಬರ್ 19ರಂದು ಹೈದರಾಬಾದಿನಲ್ಲಿ ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!