ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲೇ ಲವ್ ಮಾಕ್ಟೇಲ್ ಸಿನಿಮಾ ವಿಭಿನ್ನ ಛಾಪನ್ನು ಮೂಡಿಸಿತ್ತು. ಒಂದೇ ರೀತಿ ಸಿನಿಮಾಗಳನ್ನು ನೋಡಿ ಬೋರಾಗಿದ್ದ ಪ್ರೇಕ್ಷಕರಿಗೆ ಲವ್ ಮಾಕ್ಟೇಲ್ ಹಬ್ಬದೂಟವಾಗಿತ್ತು.
ಲವ್ ಮಾಕ್ಟೇಲ್ ಯಶಸ್ಸನ್ನು ಕಂಡ ನಂತರ ಇದರ ಸೀಕ್ವೆಲ್ ಮಾಡಿದರೆ ಜನರಿಗೆ ಇಷ್ಟವಾಗುತ್ತದೆ ಅನ್ನೋ ಆಸೆ ಹೊತ್ತು ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಲವ್ ಮಾಕ್ಟೇಲ್-2 ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಎಲ್ಲರದ್ದೂ ಆಗಿದೆ. ಇದಕ್ಕೆ ಉತ್ತರ ದೊರಕಿದ್ದು ಇಂದು ಲವ್ ಮಾಕ್ಟೇಲ್-2 ಚಿತ್ರದ ರಿಲೀಸಿಂಗ್ ಡೇಟ್ ರಿವೀಲ್ ಆಗಲಿದೆ. ಅದಕ್ಕೂ ಮುನ್ನ ರಿಲೀಸಿಂಗ್ ಡೇಟ್ ಗೆಸ್ ಮಾಡಿ ಎಂದು ಮಿಲನಾ ನಾಗರಾಜ್ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ಪ್ರಾಯಶಃ ಲವ್ ಮಾಕ್ಟೇಲ್ ಫೆ.14ಕ್ಕೆ ರಿಲೀಸ್ ಆಗಬಹುದು ಎಂದು ಉತ್ತರಿಸಿದ್ದಾರೆ.