ಹೊಸದಿಗಂತ ಆನ್ ಲೈನ್ ಡೆಸ್ಕ್:
ಪತಿಯ ಇನ್ನೊಂದು ಬಣ್ಣ ಗೊತ್ತಾಗ್ತಿದ್ದಂತೆ ಕೆಂಡಾಮಂಡಲವಾದ ಪತ್ನಿ, ಪತಿ ಹಾಗೂ ಪತಿ ಗರ್ಲ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪತಿರಾಯ ತನ್ನ ಲವರ್ ಜೊತೆ ಜಿಮ್ನಲ್ಲಿ ಕಾಲ ಕಳೆಯುತ್ತಿದ್ದ ವೇಳೆ ಅಲ್ಲಿಗೆ ತೆರಳಿರುವ ಹೆಂಡತಿ ಇಬ್ಬರಿಗೂ ಶೋನಿಂದ ಧರ್ಮದೇಟು ನೀಡಿದ್ದಾಳೆ. ಸುಮಾರು 10 ನಿಮಿಷಗಳ ಕಾಲ ಮೂವರ ನಡುವೆ ವಾದ – ವಿವಾದ ನಡೆದಿದ್ದು, ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕಳೆದ ಕೆಲ ತಿಂಗಳಿಂದ ಗಂಡ – ಹೆಂಡತಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಮಹಿಳೆ ನೂರ್ಮಹಲ್ ತನ್ನ ಗಂಡನ ವಿರುದ್ಧ ಶಹಜಹಾನಾಬಾದ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲು ಮಾಡಿದ್ದಳು.
ಇಷ್ಟಾದರೂ ಕೂಡ ಆಕೆಯ ಗಂಡ ಬೇರೆ ಹುಡುಗಿ ಜೊತೆ ತಿರುಗಾಡುತ್ತಿದ್ದನು. ಪೊಲೀಸ್ ವಿಚಾರಣೆ ವೇಳೆ ತನಗೆ ಯಾವುದೇ ರೀತಿಯ ಹುಡುಗಿಯ ಜೊತೆ ಸಂಬಂಧವಿಲ್ಲ. ಯಾವುದೇ ಹುಡುಗಿ ಸ್ನೇಹಿತೆ ಕೂಡ ಇಲ್ಲ ಎಂದು ಹೇಳಿಕೊಂಡಿದ್ದ. ಇದಾದ ಬಳಿಕ ಗಂಡನ ಮೇಲೆ ನೂರ್ಮಹಲ್ ಕಣ್ಣಿಡಲು ಶುರು ಮಾಡಿದ್ದಳು.
ಅಕ್ಟೋಬರ್ 15ರಂದು ಪತಿ ತನ್ನ ಬುಲೆಟ್ ಬೈಕ್ ಮೇಲೆ ಮಹಿಳೆಯೊಬ್ಬಳನ್ನು ಕರೆದುಕೊಂಡು ಹೋಗಿರುವುದನ್ನ ನೂರ್ಮಹಲ್ ನೋಡಿದ್ದಳು. ಅವರಿಬ್ಬರು ಒಟ್ಟಿಗೆ ಜಿಮ್ಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ಹೆಂಡತಿ ಇಬ್ಬರಿಗೂ ಶೂನಿಂದ ಹೊಡೆದಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.