ತಂಗಿ ಪ್ರೀತಿಗೆ ಅಣ್ಣನೇ ಶತ್ರು: ತಂಗಿ ಪ್ರೀತಿಯ ವಿಚಾರ ತಿಳಿದು ಅಣ್ಣ ಮಾಡಿದ್ದೇನು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತನ್ನ ತಂಗಿ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ಅಣ್ಣ ಸಿನಿಮೀಯ ರೀತಿಯಲ್ಲಿ ಪ್ರೇಮಿಗಳನ್ನು ಅಟ್ಯಾಕ್‌ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ಅಯೋಧ್ಯನಗರ ಪ್ರದೇಶದಲ್ಲಿ ನಡೆದಿದೆ. ತನ್ನ ತಂಗಿಯ ಚಲನವಲನ ಗಮನಿಸಿ, ರೆಡ್‌ಹ್ಯಾಂಡಾಗಿ ಹಿಡಿಯಬೇಕೆಂದು ಫಾಲೋ ಮಾಡಿದ ಅಣ್ಣನಿಗೆ ಸರಿಯಾಗೇ ಸಿಕ್ಕಿಬಿದ್ದಿದ್ದಾರೆ.

ತಂಗಿ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ತೆರಳುತಿದ್ದನ್ನು ಕಂಡು ಸಿಟ್ಟಿನಿಂದ ಹಿಡಿಯಲು ಯತ್ನಿಸಿದ್ದಾನೆ. ಆದರೆ, ಬೈಕ್ ವೇಗ ಹೆಚ್ಚಿಸಿಕೊಂಡು ಇಬ್ಬರೂ ಪರಾರಿಯಾಗಿದ್ದಾರೆ. ಬೆಂಬಿಡದ ಭೂತವಾಗಿ ಹಿಂದಿನಿಂದ ಮಿನಿ ಟ್ರಕ್‌ನಲ್ಲಿ ಫಾಲೋ ಮಾಡಿ ಬಂದ ಅಣ್ಣ ಏಕಾಏಕಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ ಪ್ರಿಯಕರ ಸೇರಿದಂತೆ ಯುವತಿ ಗಾಯಗೊಂಡಿದ್ದಾರೆ. ತನ್ನ ತಂಗಿಯ ಪ್ರೀತಿ ವಿಚಾರ ಹಿಡಿಸದ ಅಣ್ಣ ಡಿಕ್ಕಿ ಹೊಡೆದಿದ್ದಲ್ಲದೆ. ಕೆಳಗಿಳಿದು ಇಬ್ಬರಿಗೂ ಮನಬಂದಂತೆ ಥಳಿಸಿದ್ದಾನೆ. ಪ್ರಸ್ತುತ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರೇಮಿಗಳಿಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಆರೋಪಿ ಅಜೀಂ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!