spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೆಳದಿ ಶಿವಪ್ಪನಾಯಕ ಕೃಷಿ- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ

- Advertisement -Nitte

ಹೊಸದಿಗಂತ ವರದಿ ಶಿವಮೊಗ್ಗ :

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದ್ದು, ಇದರಲ್ಲಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಉತ್ಪಾದನಾ ಕ್ಷೇತ್ರವನ್ನಾಗಿ ಮಾಡುವಲ್ಲಿ ಕೃಷಿ ಪದವೀಧರರ ಪಾತ್ರ ಮುಖ್ಯವಾಗಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಉಪಮಹಾ ನಿರ್ದೇಶಕ ಡಾ.ಸಿ.ಆರ್. ಅಗ್ರವಾಲ್ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ನವುಲೆಯ ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ 6 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದರು.
ಪೋಷಕಾಂಶ ಯುಕ್ತ ಆಹಾರ ಉತ್ಪಾದನೆ ಮತ್ತು ಬಳಕೆ ಇಂದು ತುಂಬಾ ಅಗತ್ಯವಾಗಿದ್ದು, ಕೃಷಿ ಪದವೀಧರರು ಹೆಚ್ಚಿನ ಪೋಷಕಾಂಶ ಇರುವ ಆಹಾರ ಬೆಳೆಗಳನ್ನು ಬೆಳೆಯುವ ಕಡೆ ಗಮನ ಹರಿಸಬೇಕಿದೆ. ಹಸಿವು ಹಾಗೂ ಪೋಷಕಾಂಶ ರಹಿತ ಆಹಾರ ದೇಶವನ್ನು ಬಾಧಸುತ್ತಿದೆ. ಇದನ್ನು ನೀಗಿಸುವಲ್ಲಿ ಕೃಷಿ ಪದವೀಧರರ ಜವಾಬ್ದಾರಿ ಹೆಚ್ಚಿದೆ ಎಂದರು.
ತಾಂತ್ರಿಕತೆಯನ್ನು ಅ ಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಆಹಾರ ಉತ್ಪಾದನೆಗೆ ಆದ್ಯತೆ ನೀಡಬೇಕು. ಇಂದು ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹತ್ತರದ ಪಾತ್ರ ವಹಿಸುತ್ತಿದೆ. ಅದೇ ರೀತಿ ಕೃಷಿ ಕ್ಷೇತ್ರ ಕೂಡ ತಾಂತ್ರಿಕತೆ ಅಳವಡಿಸಿಕೊಂಡು ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಇದರಿಂದಾಗಿ ಹಣ್ಣು, ದ್ವಿದಳ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕೆಂದರು ಹೇಳಿದರು.
ಕೆಲವು ಬೆಳೆಗಳಿಗೆ ಅತಿಯಾಗಿ ನೀರು ಬಳಕೆ ಮಾಡಿ ಅವುಗಳ ಗುಣಮಟ್ಟ ಹಾಳು ಮಾಡಲಾಗುತ್ತಿದೆ. ಕಡಿಮೆ ನೀರಿನಲ್ಲಿ ಗುಣಮಟ್ಟದ ಹಾಗೂ ಪೋಷಕಾಂಶಯುಕ್ತ ಆಹಾರ ಉತ್ಪಾದನೆ ಸಾಧ್ಯವಿರುವುದರಿಂದ ಈ ಕ್ಷೇತ್ರದ ಕಡೆ ಗಮನ ಹರಿಬೇಕೆಂದ ಅವರು, ಪದವಿಗಿಂತ ಬದ್ಧತೆ ಅತಿ ಮುಖ್ಯವಾಗಿದ್ದು, ಯಾವುದೆ ಕ್ಷೇತ್ರದಲ್ಲಿ ತೊಡಗಿಕೊಂಡರು ಬದ್ಧತೆ ಇರಬೇಕೆಂದು ತಿಳಿಸಿದರು.
ಆಹಾರ ಉತ್ಪಾದನೆ ಹಾಗೂ ಸಂಸ್ಕರಣೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕಿದೆ. ಕೃಷಿ ಪದವೀಧರರು ಈ ಕಡೆ ಗಮನ ನೀಡಬೇಕಿದೆ. ದೇಶದಲ್ಲಿ ಕೃಷಿಗೆ ವಿಫುಲ ಅವಕಾಶವಿದೆ. ಆದರೆ ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿಯಾಗಿದೆ. ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ ಸವಾಲುಗಳನ್ನು ಎದುರಿಸಿ, ಮುನ್ನಡೆದರೆ ಬೇರೆಲ್ಲಾ ಉದ್ಯಮಗಳಿಗಿಂತ ನೆಮ್ಮದಿಯಾಗಿರಬಹುದೆಂದು ಹೇಳಿದರು.
ರಾಜ್ಯಪಾಲರೂ ಹಾಗೂ ವಿವಿಯ ಕುಲಾಧಿಪತಿಗಳೂ ಆದ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರಧಾನ ಮಾಡಿದರು.
ವಿವಿ ವತಿಯಿಂದ ಇದೇ ಮೊದಲ ಬಾರಿಗೆ ಹೈದರಾಬಾದ್‌ನ ಭಾರತ್ ಬಯೋ ಟೆಕ್ ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಎಲ್ಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss