ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಇಂಧನ ಬೆಲೆ ಏರಿಕೆ ನಡುವೆ ಈಗ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ವಾಣಿಜ್ಯ ಬಳಕೆಯ 19 ಕೆ.ಜಿ.ಯ ಸಿಲಿಂಡರ್ ದರ ಬರೋಬ್ಬರಿ 266 ರೂ. ಏರಿಕೆಯಾಗಿದೆ. ಸದ್ಯ ಮನೆ ಬಳಕೆಯ 14.5 ಕೆ.ಜಿಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಒಂದು ಸಿಲಿಂಡರ್ ದರ 2000 ರೂ. ಗೆ ತಲುಪಿದ್ದು, ಮುಂಬೈ ನಲ್ಲಿ 1,683 ರೂ. ಆಗಿದೆ. ಕೊಲ್ಕತ್ತಾದಲ್ಲಿ 2,073 ರೂ.ಗೆ ಏರಿಕೆಯಾಗಿದೆ ಮತ್ತು ಚೆನ್ನೈ ನಲ್ಲಿ 2,133 ರೂ. ಆಗಿದೆ.
ಇತ್ತೀಚೆಗಷ್ಟೆ ಮನೆ ಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ 15 ರೂ. ಏರಿಕೆಯಾಗಿತ್ತು.