IPL 2023 | ಆರ್‌ಸಿಬಿ -ಲಕ್ನೋ ರೋಚಕ ಪಂದ್ಯ, ಆರ್‌ಸಿಬಿಗೆ ಮತ್ತೆ ಸೋಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರ್‌ಸಿಬಿಗೆ ಮತ್ತೆ ಸೋಲು ಎದುರಾಗಿದೆ.

ಲಕ್ನೋ ವಿರುದ್ಧ ನಡೆದ ಪಂದ್ಯ ರೋಚಕವಾಗಿದ್ದು, ಕ್ರೀಡಾಭಿಮಾನಿಗಳಿಗೆ ಕಡೆವರೆಗೂ ಕೌತುಕ ಎದುರಾಗಿತ್ತು. ಕಡೆಯ ರನ್‌ವರೆಗೂ ಯಾರು ಗೆಲ್ಲುತ್ತಾರೆ ಎಂದು ಪ್ರೇಕ್ಷಕ ಸೀಟ್‌ನ ತುದಿಯಲ್ಲಿ ಬಂದು ಕೂರುವಂಥ ಪಂದ್ಯ ಇದಾಗಿತ್ತು.

ಅಂತಿಮವಾಗಿ ಕೊನೆಯ ಎಸೆತದಲ್ಲಿ ಒಂದು ರನ್ ಕಲೆ ಹಾಕಿ ಲಕ್ನೋ ಗೆಲುವು ಸಾಧಿಸಿತು. ಸ್ಟೋಯ್ನಿಸ್ ಹಾಗೂ ಪೂರನ್ ಲಕ್ನೋ ತಂಡಕ್ಕೆ ಗೆಲುವು ತಂದುಕೊಟ್ಟರು.

ಮೊದಲು ಆರ್‌ಸಿಬಿ ಬ್ಯಾಟಿಂಗ್ ಮಾಡಿದ್ದು, 213 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಬೆನ್ನತ್ತಿದ ಲಕ್ನೋಗೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಸ್ಟೋಯ್ನಿಸ್ ಹಾಗೂ ಪೂರನ್ ಅರ್ಧಶತಕದಿಂದ ಲಕ್ನೋ ಗೆಲುವಿಗೆ ಸನಿಹವಾಗಿತ್ತು. ಕೊನೆಯ ಓವರ್‌ನಲ್ಲಿ 5ನೇ ಎಸೆತದಲ್ಲಿ ಜಯ್‌ದೇವ್ ಉನದ್ಕಟ್ ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದ್ದು, ಕಡೆಗೆ ಒಂದು ರನ್ ಬೇಕಾಗಿತ್ತು. ಅವೇಶ್ ಖಾನ್ ಸಿಂಗಲ್ ರನ್ ಗಳಿಸಿ ಜಯ ತಂದುಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!