ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಲುಧಿಯಾನಾದಲ್ಲಿ ಒಟ್ಟೂ 5.5 ಕೆಜಿ ಹೆರಾಯಿನ್ ಅನ್ನು ಲುಧಿಯಾನಾ ಪೋಲೀಸ್ ನ ವಿಶೇಷ ಕಾರ್ಯಾಚರಣೆ ತಂಡವು ವಶಪಡಿಸಿಕೊಂಡಿದೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ಬೆಲೆಬಾಳುವ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಟಿಎಫ್ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಸ್ನೇಹದೀಪ್ ಶರ್ಮಾ “ಮೊದಲ ಪ್ರಕರಣದಲ್ಲಿ ಆರೋಪಿ ಅಶು ಅರೋರಾನನ್ನು ಬಂಧಿಸಲಾಗಿದ್ದು ಲುಧಿಯಾನದ ಮನಕ್ವಾಲ್ ಗ್ರಾಮದ ಬಳಿ 2 ಕೆಜಿ 40 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಎರಡನೇ ಪ್ರಕರಣದಲ್ಲಿ ಲೂಧಿಯಾನ ಚಂದರ್ ನಗರ ಪ್ರದೇಶದಲ್ಲಿ ಸಚಿನ್ ಶರ್ಮಾ ಎಂಬಾತನನ್ನು ಬಂಧಿಸಿ 810 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಮೂರನೇ ಪ್ರಕರಣದಲ್ಲಿ ಲೂಧಿಯಾನದ ಲೋಹರಾ ಗ್ರಾಮದ ಬಳಿ ಜಸ್ವಿಂದರ್ ಸಿಂಗ್ ಎಂಬಾತನಿಂದ 2 ಕೆಜಿ 650 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ” ಎಂದಿದ್ದರೆ.
ಈ ಕುರಿತು ಮೊಹಾಲಿಯ STF ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.