ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಬ್ರೆಜಿಲ್ನ ಎರಡು ದೇಶೀಯ ಮಾಂಸ ಪ್ಲಾಂಟ್(meat plant)ನಲ್ಲಿ ಮ್ಯಾಡ್ ಕೌ ಪ್ರಕರಣ ಕಾಣಿಸಿಕೊಂಡಿದ್ದು, ಚೀನಾಕ್ಕೆ ಗೋಮಾಂಸ ರಫ್ತು ಸ್ಥಗಿತಗೊಳಿಸಲಾಗಿದೆ.
ಎರಡು ಗೋವುಗಳಲ್ಲಿ ಮ್ಯಾಡ್ ಕೌ ರೋಗ ಕಾಣಿಸಿದ ಕೂಡಲೇ ಚೀನಾಕ್ಕೆ ಗೋಮಾಂಸ ರಫ್ತು ಸ್ಥಗಿತಗೊಳಿಸುತ್ತೇವೆ ಎಂದು ಬ್ರೆಜಿಲ್ ಕೃಷಿ ಸಚಿವಾಲಯ ಹೇಳಿದೆ.
ಆಮದು ಮತ್ತೆ ಪ್ರಾರಂಭಿಸುವ ಬಗ್ಗೆ ಶೀಘ್ರವೇ ಮಾಹಿತಿ ನೀಡುತ್ತೇವೆ ಎಂದು ಹೇಳಲಾಗಿದೆ.
ಈ ರೋಗದಿಂದ ಮಾನವ ಅಥವಾ ಪ್ರಾಣಿಗಳಿಗೆ ಯಾವುದೇ ಹಾನಿ ಇಲ್ಲ ಎಂದು ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಎರಡೂ ದೇಶಗಳ ನಡುವೆ ಅಸ್ತಿತ್ವವಿರುವ ದ್ವಿಪಕ್ಷೀಯ ಶಿಷ್ಟಾಚಾರದ ಅಡಿಯಲ್ಲಿ ತಾತ್ಕಾಲಿಕ ರಫ್ತು ಸ್ಥಗಿತಗೊಂಡಿದೆ.
ಬ್ರೆಜಿಲ್ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತುದಾರರಾಗಿದ್ದು, ಚೀನಾ ಅತಿದೊಡ್ಡ ಗ್ರಾಹಕನಾಗಿದೆ. ಬ್ರೆಜಿಲ್ನ ಅರ್ಧಕ್ಕಿಂತ ಹೆಚ್ಚು ಮಾಂಸ ಚೀನಾ ಹಾಗೂ ಹಾಂಗ್ಕಾಂಗ್ಗೆ ಹೋಗುತ್ತದೆ. ಮ್ಯಾಡ್ ಕೌ ರೋಗ ಗೋವಿನ ನರ್ವಸ್ ಸಿಸ್ಟಂಗೆ ನೇರ ಎಫೆಕ್ಟ್ ಮಾಡುತ್ತದೆ. ಕೋ-ಆರ್ಡಿನೇಶನ್, ಡಿಪ್ರೆಶನ್ನಂತರ ರೋಗಲಕ್ಷಣಗಳು ಗೋವುಗಳಲ್ಲಿ ಕಾಣಿಸಿಕೊಳ್ಳುತ್ತದೆ.