spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೇಡ್ ಇನ್ ಇಂಡಿಯಾ ಆ್ಯಪಲ್ ಸ್ಮಾರ್ಟ್ ಫೋನ್ ಹೆಚ್ಚಳ, ಪಿ ಎಲ್ ಐ ಯೋಜನೆ ಯಶಸ್ಸಿನ ಸೂಚನೆ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಸ್ಮಾರ್ಟ್ ಫೋನ್ ದೈತ್ಯ ಸಂಸ್ಥೆ ಆಪಲ್ ಮೊಬೈಲ್ ಗಳ ಉತ್ಪಾದನೆ ಕ್ರಮೇಣ ಹೆಚ್ಚಳವಾಗುತ್ತಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ವರದಿ ಮಾಡಿದೆ.
ಆಪಲ್ ಸಂಸ್ಥೆಯ ಪ್ರಮುಖ ಉತ್ಪಾದನಾ ಪಾಲುದಾರಿಕೆ ಹೊಂದಿರುವ ಫಾಕ್ಸ್ ಕಾನ್ ಹಾಗೂ ವಿಸ್ಟ್ರಾನ್ ಭಾರತದಲ್ಲಿ ಉತ್ಪಾದನೆ ಆಧರಿತ ಉತ್ತೇಜನ ಯೋಜನೆ (ಪಿಐಎಲ್) ಮೂಲಕ ತನ್ನ ಗುರಿ ಸಾಧಿಸಲು ಸಜ್ಜಾಗಿದೆ.
ಈಗಾಗಲೇ ಕಳೆದ ಕೆಲವು ತಿಂಗಳುಗಳಲ್ಲಿ ಐಫೋನ್ ತನ್ನ ಉತ್ಪಾದನೆ ಹಾಗೂ ಮಾರಾಟವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದು, 2018ರಲ್ಲಿ ಈ ಪಾಲು ಶೇ.17ರಷ್ಟಿದ್ದ ಆಪಲ್ ಮೇಡ್ ಇನ್ ಇಂಡಿಯಾ ಐಫೋನ್ ಗಳ ಪಾಲುದಾರಿಗೆ 2021ರಲ್ಲಿ ಶೇ.76ಕ್ಕೆ ಏರಿಕೆಯಾಗಿದೆ.
ಭಾರತದಿಂದ ವಿದೇಶಗಳಿಗೆ ರಫ್ತಾಗುವ ಮೊಬೈಲ್ ಗಳ ಪ್ರಮಾಣ ಕೂಡ ಶೂನ್ಯದಿಂದ ಶೇ.5ರಷ್ಟಾಗಿರುವುದು ಯಶಸ್ಸಿನ ಸಂಗತಿಯಾಗಿದೆ.
ಪಿಐಎಲ್ ಯೋಜನೆ ಅಡಿಯಲ್ಲಿ ಪ್ರತಿ ವಿದೇಶಿ ಸಂಸ್ಥೆ ತಲಾ 250 ಕೋಟಿ ರೂ. ಹೂಡಿಕೆ ಮಾಡಬೇಕು. ಅಷ್ಟೇ ಅಲ್ಲ ಈ ಮೂಲಕ ಶೇ.6ರಷ್ಟು ನೇರ ಪ್ರೋತ್ಸಾಹಧನ ಪಡೆಯಲು ಹೂಡಿಕೆಯ ಮೊದಲ ವರ್ಷದಲ್ಲಿ 4 ಸಾವಿರ ಕೋಟಿ ರೂ. ಉತ್ಪಾದನೆ ಮಾಡಬೇಕಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss