Sunday, August 14, 2022

Latest Posts

ಮೇಡ್​ ಇನ್ ಇಂಡಿಯಾ ‘ಕೊವ್ಯಾಕ್ಸಿನ್’​​ ಶೇ.81ರಷ್ಟು ಪರಿಣಾಮಕಾರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದೆಲ್ಲೆಡೆ ಕೊರೋನಾ ಲಸಿಕೆಯ ಎರಡನೇ ಹಂತದ ಅಭಿಯಾನ ಶುರುವಾಗಿದ್ದು, ಇದರ ಬೆನ್ನಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ಕೊವ್ಯಾಕ್ಸಿನ್‌’ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ ವಿಶ್ಲೇಷಣೆ ವೇಳೆ ಶೇ.81 ರಷ್ಟು ಪರಿಣಾಮಕಾರಿತ್ವ ತೋರಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಹೆಚ್ಚಿನ ದತ್ತಾಂಶವನ್ನ ಸಂಗ್ರಹಿಸಲು ಮತ್ತು ಹೆಚ್ಚುವರಿ ದ್ವಿತೀಯಕ ಅಧ್ಯಯನ ಎಂಡ್ ಪಾಯಿಂಟ್ ಗಳಲ್ಲಿ ಕೋವ್ಯಾಕ್ಸಿನ್ʼನ ಪರಿಣಾಮಕಾರಿತ್ವವನ್ನ ಮೌಲ್ಯಮಾಪನ ಮಾಡಲು 130 ದೃಢೀಕೃತ ಪ್ರಕರಣಗಳಲ್ಲಿ ಅಂತಿಮ ವಿಶ್ಲೇಷಣೆಯ ಮೂಲಕ ವೈದ್ಯಕೀಯ ಪ್ರಯೋಗವನ್ನ ಮುಂದುವರಿಸುವುದು ಎಂದು ಕಂಪನಿ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ನಡೆಸಲಾದ ಕ್ಲಿನಿಕಲ್ ಟ್ರಯಲ್‌ನಲ್ಲಿ 25,800 ಮಂದಿ ಭಾಗವಹಿಸಿದ್ದರು. ಈ ಪೈಕಿ 43 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇದರ ಆಧಾರದಲ್ಲಿ ಮಧ್ಯಂತರ ವಿಶ್ಲೇಷಣೆ ಸಿದ್ಧಪಡಿಸಲಾಗಿದೆ. ಆದರೆ, ಕೋವಿಡ್ ದೃಢಪಟ್ಟ 43 ಮಂದಿಯ ಪೈಕಿ 36 ಜನರನ್ನು ಪ್ರಯೋಗಗಳಿಗಷ್ಟೇ ಬಳಸಿಕೊಳ್ಳಲಾಗಿತ್ತು. 7 ಮಂದಿ ಮಾತ್ರ ಲಸಿಕೆ ಪಡೆದಿದ್ದರು. ಇದರ ಆಧಾರದಲ್ಲಿ ಲಸಿಕೆ ಶೇ 80.6ರಷ್ಟು ಪರಿಣಾಮಕಾರಿ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss