Sunday, November 27, 2022

Latest Posts

ʼಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳು ಜಗತ್ತಿನ ಗಮನ ಸೆಳೆಯುತ್ತಿವೆʼ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ದೊಡ್ಡ ಹೆಜ್ಜೆ ಇಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ ನಲ್ಲಿ ಹೇಳಿದ್ದಾರೆ.

ಗುಜರಾತ್‌ ನ ವಡೋದರಾದಲ್ಲಿ ಟಾಟಾ-ಏರ್‌ ಬಸ್‌ ಒಕ್ಕೂಟದ ಸ್ಥಾವರಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು ” “ಭಾರತವು ಯುದ್ಧ ವಿಮಾನಗಳು ಮತ್ತು ಲಸಿಕೆಗಳನ್ನು ತಯಾರಿಸುತ್ತಿದೆ. ಮೇಡ್ ಇನ್ ಇಂಡಿಯಾ ಮೊಬೈಲ್‌ಗಳು ಮತ್ತು ಕಾರುಗಳು ಪ್ರಪಂಚದ ಗಮನವನ್ನು ಸೆಳೆಯುತ್ತಿವೆ. ಶೀಘ್ರದಲ್ಲೇ, ಪ್ರಯಾಣಿಕ ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುವುದು. ಇದು ಏರೋಸ್ಪೇಸ್ ಕ್ಷೇತ್ರದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಯಾಗಿದೆ. ವಡೋದರಾವನ್ನು ವಾಯುಯಾನ ಕ್ಷೇತ್ರದ ಕೇಂದ್ರವಾಗಿ ನೋಡಲಾಗುವುದು ” ಎಂದು ಅವರು ಹೇಳಿದರು.

ಅಂದಾಜು 22,000 ಕೋಟಿ ರೂ. ವೆಚ್ಚದಲ್ಲಿ ಈ ಒಕ್ಕೂಟ ನಿರ್ಮಾಣವಾಗುತ್ತಿದ್ದು ಖಾಸಗಿ ವಲಯದಲ್ಲಿ ಇದು ಮೊದಲ ವಿಮಾನ ತಯಾರಿಕಾ ಸೌಲಭ್ಯವಾಗಿದೆ. ಈ ಯೋಜನೆಯೊಂದಿಗೆ ಕನಿಷ್ಠ 15,000 ನುರಿತ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಅವರು ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!