ಈಜಿನಲ್ಲಿ ಮತ್ತೊಂದು ದಾಖಲೆ ಬರೆದ ಮಾಧವನ್ ಪುತ್ರ: ಏಳು ಪದಕಗಳು ವೇದಾಂತ್ ಖಾತೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಧವನ್ ತಮಿಳು, ತೆಲುಗು, ಕನ್ನಡ, ಹಿಂದಿ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ನಟ. ಒಂದು ಕಾಲದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಮಾಧವನ್ ಈಗ ನಿಧಾನವಾಗಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಮಾಧವನ್ ಜೊತೆಗೆ ಮಾಧವನ್ ಅವರ ಮಗ ಕೂಡ ಇದೀಗ ಸೆಲೆಬ್ರಿಟಿಯಾಗಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದ ತಾರೆಯರ ಬಹುತೇಕ ಮಕ್ಕಳು ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಮಾಧವನ್ ಅವರ ಪುತ್ರ ವೇದಾಂತ್ ಕ್ರೀಡೆ ಆಸಕ್ತಿ ತೋರಿಸಿದ್ದಾರೆ.

ವೇದಾಂತ್ ಬಾಲ್ಯದಿಂದಲೂ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದ. ಕಳೆದ ವರ್ಷ, ವೇದಾಂತ್ ಕೆಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ನಂತರ ಸ್ಟಾರ್ ಆಟಗಾರ ಪಟ್ಟ ಪಡೆದರು. ಚಿಕ್ಕ ವಯಸ್ಸಿನಲ್ಲೇ ಈಜಿನಲ್ಲಿ ಪದಕ ಗೆಲ್ಲುತ್ತಿರುವ ವೇದಾಂತ್ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಮಾಧವನ್ ಕೂಡ ತಮ್ಮ ಮಗ ಮತ್ತಷ್ಟು ಬೆಳೆದು ಈಜಿನಲ್ಲಿ ಅಂತರಾಷ್ಟ್ರೀಯ ಪದಕ ಗೆಲ್ಲಲಿ ಎಂದು ದುಬೈಗೆ ಶಿಫ್ಟ್ ಆಗಿದ್ದು, ಅಲ್ಲಿ ಮಗನಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ರಲ್ಲಿ, ಮಾಧವನ್ ಅವರ ಮಗ ವೇದಾಂತ್ ಈಜು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಈ ಪಂದ್ಯಗಳಲ್ಲಿ ವೇದಾಂತ್ 7 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 5 ಚಿನ್ನದ ಪದಕ ಹಾಗೂ 2 ಬೆಳ್ಳಿ ಪದಕಗಳಿವೆ. ಈಜು 100ಮೀ, 200ಮೀ, 1500ಮೀ ಓಟದಲ್ಲಿ ಚಿನ್ನದ ಪದಕ ಹಾಗೂ 400ಮೀ ಮತ್ತು 800ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಈ ವಿಷಯವನ್ನು ಸ್ವತಃ ಮಾಧವನ್ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಅನೇಕ ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ವೇದಾಂತ್ ಅವರನ್ನು ಅಭಿನಂದಿಸುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ನನ್ನ ಗುರಿ ಎಂದು ವೇದಾಂತ ಹಲವು ಬಾರಿ ಮಾಧ್ಯಮಗಳಿಗೆ ಹೇಳಿದ್ದರು. ಸ್ವಿಮ್ಮಿಂಗ್‌ನಲ್ಲಿ ವೇದಾಂತ್ ಒಲಿಂಪಿಕ್ಸ್‌ಗೆ ಹೋಗಿ ಗೆಲ್ಲಬೇಕೆಂದು ಎಲ್ಲರ ಆಶಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!