ಮದ್ಯದಂಗಡಿ ಮೇಲೆ ಕಲ್ಲು ತೂರಿದ ಉಮಾಭಾರತಿ: ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ ನ ಆಜಾದ್ ನಗರದ ಮದ್ಯದಂಗಡಿಯೊಂದಕ್ಕೆ ಮಾಜಿ ಸಿಎಂ ಉಮಾಭಾರತಿ ಅವರು ತಮ್ಮ ಬೆಂಬಲಿಗರೊಂದಿಗೆ ನುಗ್ಗಿ, ಬಾಟಲಿಗಳತ್ತ ಕಲ್ಲೆಸೆದಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮದ್ಯದಂಗಡಿಗೆ ಕಲ್ಲೆಸೆದ ವಿಡಿಯೊವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಗೂ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಒಂದು ವಾರದೊಳಗೆ ಅಂಗಡಿ ಮುಚ್ಚಬೇಕು ಎಂದು ಅವರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಇತ್ತೀಚೆಗೆ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು, ಹೋಮ್ ಬಾರ್‌’ಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ. ಮದ್ಯದ ಚಿಲ್ಲರೆ ಮಾರಾಟದ ಬೆಲೆಯನ್ನು ಶೇಕಡಾ 20 ರಷ್ಟು ಕಡಿತಗೊಳಿಸಿದೆ. ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿಯನ್ನು ವಿರೋಧಿಸಿದ್ದ ಉಮಾಭಾರತಿ, ರಾಜ್ಯದಲ್ಲಿ ಮದ್ಯ ವಿರೋಧಿ ಅಭಿಯಾನ ನಡೆಸುವುದಾಗಿ ಉಮಾ ಭಾರತಿ ಈ ಹಿಂದೆ ಘೋಷಿಸಿದ್ದರು.
ಇದೇ ವೇಳೆ ತಮ್ಮ ಹೋರಾಟ ಮಧ್ಯಪಾನದ ವಿರುದ್ಧವೇ ಹೊರತು, ಸರ್ಕಾರದ ವಿರುದ್ಧ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!