ಬರೋಬ್ಬರಿ 3,419 ಕೋಟಿ ರು. ವಿದ್ಯುತ್‌ ಬಿಲ್‌ ನೋಡಿ ಶಾಕ್‌ ನಿಂದ ಆಸ್ಪತ್ರೆ ಸೇರಿದ ವ್ಯಕ್ತಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ವಿದ್ಯುತ್ ಇಲಾಖೆ ಸಾಮಾನ್ಯವಾಗಿ ಗ್ರಾಹಕರಿಗೆ ಶಾಕ್‌ ನೀಡುತ್ತಿರುತ್ತದೆ. ಆದರೆ ಈ ಕುಟುಂಬಕ್ಕೆ ನೀಡಿದ ಶಾಕ್‌ ಅಂತಿಂತದ್ದಲ್ಲ.
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಕುಟುಂಬವೊಂದು ಜುಲೈ ತಿಂಗಳ ವಿದ್ಯುತ್ ಬಿಲ್‌ ನೋಡುತ್ತಿದ್ದಂತೆ ಕಂಗಾಲಾಗಿದೆ. ಒಂದೇ ತಿಂಗಳಿಗೆ ಬರೋಬ್ಬರಿ 3,419 ಕೋಟಿ ಬಿಲ್‌ ನೋಡಿದ ಮನೆ ಯಜಮಾನ ಅಘಾತಕ್ಕೊಳಗಾಗಿ ಕುಸಿದು ಬಿದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶಿವ್ ವಿಹಾರ್ ನಿವಾಸಿಯಾಗಿರುವ ಗುಪ್ತಾ ಅವರಿಗೆ ಗೃಹಬಳಕೆಯ ವಿದ್ಯುತ್‌ ಬಳಸಿದಕ್ಕೆ ಜುಲೈ 20 ರಂದು 3,419 ಕೋಟಿ ರೂ. ಬಿಲ್ ಕಳುಹಿಸಲಾಗಿದೆ. ಆತಂಕಕೊಳಗಾದ ಕುಟುಂಬ ಈ ಬಿಲ್ ಅನ್ನು ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಿದಾಗೂ ಆದರೆ ಅದು ಸರಿಯಾಗಿದೆ ಎಂದೇ ತೋರಿಸಿದೆ. ಅಘಾತಕ್ಕೊಳಗಾದ ಮನೆ ಮಾಲೀಕನೀಗ ಆಸ್ಪತ್ರೆ ಸೇರಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಎಚ್ಚತ್ತ ವಿದ್ಯುತ್ ಕಂಪನಿಯು ಇದೊಂದು ʼಮಾನವ ದೋಷʼ ದಿಂದ ಉಂಟಾದ ಅಡಚಣೆ ಎಂದು ಹೇಳಿದ್ದು, 1,300 ರೂಪಾಯಿಗಳ ಸರಿಪಡಿಸಿದ ಬಿಲ್ ಅನ್ನು ನೀಡಿದೆ.
“ಉದ್ಯೋಗಿಯೊಬ್ಬರು ಸಾಫ್ಟ್‌ವೇರ್‌ನಲ್ಲಿ ಬಿಲ್‌ ಮೊತ್ತ ನಮೂದಿಸುವ ಜಾಗದಲ್ಲಿ  ಗ್ರಾಹಕ ಸಂಖ್ಯೆಯನ್ನು ನಮೂದಿಸಿದ್ದಾರೆ. ಇದರ ಪರಿಣಾಮವಾಗಿ ಭಾರೀ ಮೊತ್ತದ ಮೊತ್ತದ ಬಿಲ್ ಬಂದಿದೆ. ವಿದ್ಯುತ್ ಗ್ರಾಹಕರಿಗೆ 1,300 ರೂ.ಗಳ ತಿದ್ದುಪಡಿ ಬಿಲ್ ನೀಡಲಾಗಿದೆ,” ಎಂದು ಸಂಸ್ಥೆ ತಿಳಿಸಿದೆ.
ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!