ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮದ್ರಾಸ್ ಐ ಅಬ್ಬರ ಹೆಚ್ಚಾಗಿದ್ದು, ಕಳೆದ 20 ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಕಣ್ಣಿನ ಸೋಂಕಿಗೆ ತುತ್ತಾಗಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಹರಡುವ ಮದ್ರಾಸ್ ಐ, ರಾಜ್ಯದಲ್ಲಿ ಬರೋಬ್ಬರಿ 40ಸಾವಿರ ಮಂದಿಗೆ ಬಾಧಿಸಿದೆ. ಕಣ್ಣಿನ ಉರಿ, ಕೆಂಪು ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ.
ಸೋಂಕಿತರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕಾರಣಕ್ಕೆ ಸೋಂಕು ಹರಡುವುದಿಲ್ಲ. ಆದರೆ ಸೋಂಕಿತರ ಜತೆ ಹ್ಯಾಂಡ್‌ಶೇಕ್, ಅವರನ್ನು ಮುಟ್ಟುವುದು, ಸೋಂಕಿತರು ಬಳಸಿದ ವಸ್ತುಗಳನ್ನು ಬಳಸುವುದರಿಂದ ರೆಡ್ ಐ ಸಮಸ್ಯೆ ಬರುತ್ತದೆ.