spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವೈರಲ್ ಆಯ್ತು ಮ್ಯಾಗಿ ಮಿಲ್ಕ್‌ಶೇಕ್ ವಿಚಿತ್ರ ರೆಸಿಪಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ರುಚಿ ಫೋಟೊ ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ.
ಆದರೆ ಈ ಬಾರಿ ವೈರಲ್ ಆಗಿರೋ ಡಿಶ್‌ನ್ನು ಜನ ಇಷ್ಟಪಡೋದಕ್ಕಿಂತ ವಾಕರಿಕೆ ಬರುತ್ತಿದೆ ಅಂತಿದ್ದಾರೆ.
ಹೌದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮ್ಯಾಗಿ ಮಿಲ್ಕ್‌ಶೇಕ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಕಾಂಬಿನೇಶನ್ ಕೇಳುತ್ತಿದ್ದಂತೆ ಇನ್ನೂ ಏನೇನ್ ಬಾಕಿ ಇದೆಯೋ ಅಂತ ಅನಿಸಿದರೂ ಇದನ್ನು ಜನ ಇಷ್ಟಪಟ್ಟು ತಿಂತಿರೋದು ಅಥವಾ ಕುಡಿತಿರೋದು ನಿಜ.
ಮ್ಯಾಗಿ ಮಿಲ್ಕ್‌ಶೇಕ್‌ನಂತಹ ಐಡಿಯಾ ಬಂದದ್ದಾರೂ ಯಾರಿಗೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಈ ಪೋಸ್ಟ್ ಮಾಡಿ, ಇಂಥದ್ದೆಲ್ಲ ಯಾರು ಶುರು ಮಾಡ್ತಾರೆ, ಜೀವಂತ ಹಿಡಿಯಬೇಕು ಇವರನ್ನು ಎಂದು ಹೇಳಿದ್ದಾರೆ.
ಇನ್ನು ವಿಚಿತ್ರವಾದ ರೆಸಿಪಿಗಳು ಬೇಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರೆ ಆಗಿರಿ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss