Wednesday, August 17, 2022

Latest Posts

ಗೋಕರ್ಣದ ಶ್ರೀ ಮಹಾಬಲೇಶ್ವರ ದೇಗುಲದಲ್ಲಿ ಮಹಾರಥೋತ್ಸವ

ಹೊಸದಿಗಂತ ವರದಿ, ಗೋಕರ್ಣ:

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶಾರ್ವರಿ ಸಂವತ್ಸರದ ಶಿವರಾತ್ರಿ ಮಹೋತ್ಸವದ ಅಂಗವಾಗಿ ‘ಶ್ರೀಮನ್ಮಹಾರಥೋತ್ಸವ’
ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಮಹಾರಥವು ವಿಶೇಷ ಪುಷ್ಪಾಲಂಕಾರದಿಂದ ಶೋಭಿಸುತ್ತಿತ್ತು.
ಅರ್ಚಕರಾದ ವೇ. ಅಮೃತೇಶ ಭಟ್ ಹೀರೆ ಅರ್ಚಕತ್ವದಲ್ಲಿ ಮಹಾರಥೋತ್ಸವ ಜರುಗಿತು. ಸ್ಥಳೀಯ ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಭಕ್ತರು ‘ಹರ ಹರ ಮಹಾದೇವ’ ಎಂಬ ಘೋಷದೊಂದಿಗೆ ‘ಸಾರ್ವಭೌಮ’ ಶ್ರೀ ಮಹಾಬಲೇಶ್ವರ ದೇವರ ಮಹಾರಥವನ್ನು ಎಳೆದು ಸಂಭ್ರಮಿಸಿದರು .
ಪ ಪೂ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ, ಮತ್ತು ಪ ಪೂ ಶ್ರೀ ಶ್ರೀ ಶಿವಾನಂದ ಸರಸ್ವತಿ ಮಹಾಸ್ವಾಮಿಗಳು ,
ಶ್ರೀ ಗೌಡಪಾದಾಚಾರ್ಯ ಕವಳೆಮಠ ಇವರು ರಥಕಾಣಿಕೆ ಸಮರ್ಪಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!