ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದರ್ಶನದ ಪ್ರಸಿದ್ಧ ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರದಲ್ಲಿ ನಟಿಸಿದ್ದ ಜನಪ್ರಿಯ ನಟ ಪ್ರವೀಣ್ ಕುಮಾರ್ ಸೋಬ್ತಿ (74) ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಸೋಮವಾರ ರಾತ್ರಿ 10 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪ್ರವೀಣ್ ಅವರು ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದರು. ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ ( 2 ಚಿನ್ನ,1 ಬೆಳ್ಳಿ, 1 ಕಂಚು). 1968 ಹಾಗೂ 1972ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಇವರ ಯಶಸ್ಸಿಗೆ ಸರ್ಕಾರ ಅರ್ಜುನ ಪ್ರಸಸ್ತಿ ನೀಡಿ ಗೌರವಿಸಿತು. ಬಳಿಕ ಇವರು ಗಡಿ ಭದ್ರತಾ ಪಡೆಯ ಡೆಬ್ಯುಟಿ ಕಮಾಂಡೆಂಟ್ ಹುದ್ದೆ ಪಡೆದಿದ್ದರು.