Saturday, August 13, 2022

Latest Posts

ಜೋಯಿಡಾದ ಪರಿಸರ ಸೇನಾನಿಯನ್ನು ಅರಸಿ ಬಂತು ರಾಜ್ಯೋತ್ಸವ ಪ್ರಶಸ್ತಿ

ಹೊಸ ದಿಗಂತ ವರದಿ ಕಾರವಾರ :

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸುಮಾರು 85 ವರ್ಷದ ಮಹಾದೇವ ಬುದೋ ವೆಳಿಪ್ ಅವರಿಗೆ ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದವರಾದ ಮಹಾದೇವ ಅವರು ಹಿಂದುಳಿದ ಕುಣಬಿ ಸಮುದಾಯಕ್ಕೆ ಸೇರಿದವರು. ಚಿಕ್ಕ ವಯಸ್ಸಿನಿಂದಲೇ ಅರಣ್ಯ ಪ್ರದೇಶದ ಗಿಡ,ಮರ,ಬಳ್ಳಿಗಳು,ಗಡ್ಡೆ ಗೆಣಸುಗಳು, ಪ್ರಾಣಿ ಪಕ್ಷಿಗಳ ಪ್ರಭೇದ ಸಂರಕ್ಷಣೆಗೆ ಮಹತ್ವ ನೀಡಿ ಜಾನಪದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಅವರು ಕುಣಬಿ ಜನಾಂಗದ ಜನರ ವಿವಿಧ ಹೋರಾಟಗಳಲ್ಲಿ ಭಾಗವಹಿಸಿ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ.

ಜಾನಪದ ಕಲಾವಿದರೂ, ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತರೂ ಆಗಿರುವ ಮಹಾದೇವ ವೆಳಿಪ್ ಅವರಿಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ.

ಪರಿಸರ,ಜಾನಪದ, ನಾಟಿ ವೈದ್ಯ, ಕೃಷಿ, ಸಾಮಾಜಿಕ ಹೋರಾಟ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಾದೇವ ಅವರಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ  ಇದೀಗ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss