ಮಹಾಲಕ್ಷ್ಮಿ ಮರ್ಡರ್‌ ಕೇಸ್‌: ಮನೆಯಲ್ಲಿ ಹಲವರ ಫಿಂಗರ್‌ ಪ್ರಿಂಟ್‌ ಪತ್ತೆ, ಕೊಲೆಗಾರ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ವೈಯಾಲಿಕಾವಲ್‌ ನಿವಾಸಿ ಮಹಾಲಕ್ಷ್ಮೀ ಕೊಲೆ  ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿ ಹುಡುಕಾಟದಲ್ಲಿ ಪೊಲೀಸರು ಮಹಾಲಕ್ಷ್ಮೀ ಮನೆಯನ್ನು ಶೋಧಿಸಿದ್ದು, ಹಲವರ ಫಿಂಗರ್‌ಪ್ರಿಂಟ್‌ ಪತ್ತೆಯಾಗಿದೆ.

ಮಹಾಲಕ್ಷ್ಮೀಯನ್ನು 50 ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟು, ಆರೋಪಿ ಪರಾರಿಯಾಗಿದ್ದಾನೆ. ಕೊಲೆಯಾದ ಮಹಾಲಕ್ಷ್ಮೀ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಆರೋಪಿಯ ಗುರುತಿಗಾಗಿ ಶೋಧ ನಡೆಸಿದಾಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿವೆ. ಈ ಮೂಲಕ, ಮಹಾಲಕ್ಷ್ಮೀಯನ್ನು ಹಲವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.

ಈ ನಡುವೆ ಮಹಾಲಕ್ಷ್ಮಿಯ ತಾಯಿ ಮೀನಾ ಕೊಟ್ಟಿರುವ ದೂರಿನಲ್ಲಿ ಹಲವು ಸಂಗತಿಗಳು ಬಯಲಾಗಿವೆ. ಮೀನಾ ಅವರಿಗೆ ನಾಲ್ವರು ಮಕ್ಕಳು. ಈ ಪೈಕಿ ಮೊದಲ ಮಗಳು ಲಕ್ಷ್ಮೀ. ಲಕ್ಷ್ಮೀ, ಸೈಯದ್ ಇಮ್ರಾನ್ ಎಂಬುವುರ ಜೊತೆ ಲವ್ ಮ್ಯಾರೇಜ್ ಆಗಿದ್ದು, ಶಾಹೀದಾ ಬುಷುರ ಅಂತ ಹೆಸರು ಬದಲಿಸಿಕೊಂಡಿದ್ದಾಳೆ.

ಕೊಲೆಯಾದ ಈ ಮಹಾಲಕ್ಷ್ಮೀ ಎರಡನೇ ಮಗಳು. ಹೇಮಂತ್ ದಾಸ್ ಎಂಬುವುರ ಜೊತೆ ಅರೇಂಜ್ಡ್​ ಮ್ಯಾರೆಜ್​ ಆಗಿದ್ದರು. ಮೂರನೇಯವನು ಮಗ ಉಕ್ಕುಂ ಸಿಂಗ್, ಡೆಲಿವರಿ ಬಾಯ್ ಆಗಿದ್ದಾರೆ. ನಾಲ್ಕನೆಯವನು ನರೇಶ್, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮೀ ಕಳೆದ ಒಂಬತ್ತು ತಿಂಗಳಿನಿಂದ ಪತಿಯಿಂದ ದೂರವಿದ್ದಳು. ಕಳೆದ ವರ್ಷ ಅಕ್ಟೋಬರ್​ನಲ್ಲಿ ವೈಯಾಲಿಕಾವಲ್​ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಉಕ್ಕುಂ ಸಿಂಗ್ ಮತ್ತು ಆತನ ಪತ್ನಿ ಹಾಗೂ ಮಹಾಲಕ್ಷ್ಮೀ ಒಟ್ಟಿಗೆ ಇದ್ದರು. ಅಕ್ಕ ಮಹಾಲಕ್ಷ್ಮೀ, ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದಳು ಅಂತ ಉಕ್ಕುಂ ಸಿಂಗ್​ ಬೇರೆ ಮನೆಗೆ ಮಾಡಿದರು. ಹೀಗೆ ಗಂಡನ ಜೊತೆಗಿನ ಜಗಳ, ಸಹೋದರನ ಜೊತೆಗಿನ ಮುನಿಸು, ಮನೆ ಬಿಟ್ಟು ಹೋಗಿದ್ದು ಎಲ್ಲವೂ ಬಯಲಾಗಿದೆ.

ಆದರೆ ಕೊಲೆ ಮಾಡಿತಾದ ನಮ್ಮ ರಾಜ್ಯದವನಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!