SHOCKING NEWS| ಈ ರೈಲು ಟಿಕೆಟ್ ಬೆಲೆ ಅಕ್ಷರಶಃ 19 ಲಕ್ಷ ರೂಪಾಯಿ..!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ, ಬಸ್ ಪ್ರಯಾಣಕ್ಕೆ ಹೋಲಿಸಿದರೆ ರೈಲು ಪ್ರಯಾಣದ ವೆಚ್ಚ ಕಡಿಮೆ ಮತ್ತು ಅನುಕೂಲಕರವಾಗಿದೆ. ಆದರೆ ಈ ರೈಲು ಟಿಕೆಟ್ ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರೆಂಟಿ. ಇದರ ಟಿಕೆಟ್‌ ಬೆಲೆ ಅಕ್ಷರಶಃ 19 ಲಕ್ಷ ರೂಪಾಯಿ. ಆ ರೈಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ನಿರ್ವಹಿಸುವ ಮಹಾರಾಜಸ್ ಎಕ್ಸ್‌ಪ್ರೆಸ್, ಪ್ರಯಾಣಿಕರಿಗೆ ಐಷಾರಾಮಿ ರೈಲು ಪ್ರಯಾಣದ ಅನುಭವವನ್ನು ನೀಡುತ್ತದೆ.

ಮಹಾರಾಜಸ್ ಎಕ್ಸ್‌ಪ್ರೆಸ್ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಐಷಾರಾಮಿ ರೈಲು ಪ್ರಯಾಣದ ಅನುಭವವನ್ನು ನೀಡುತ್ತದೆ. ಐಷಾರಾಮಿ ಅಂದರೆ ಅಂತಿಂತಹ ಐಷಾರಾಮಿ ಅಲ್ಲ. ಅದೊಂದು ವಿಲ್ಲಾ ಇದ್ದಂತೆ. ಬೆಲೆಯು ಹೆಸರೇ ಸೂಚಿಸುವಂತೆ ಮಹಾರಾಜಸ್ ಎಕ್ಸ್‌ಪ್ರೆಸ್‌ ರೀತಿಯಲ್ಲೇ ಸೌಲಬ್ಯಗಳೂ ಇವೆ. ಈ ರೈಲಿನ ಒಂದು ಕೋಚ್ ಅನ್ನು ಐಷಾರಾಮಿ ವಿಲ್ಲಾ ಆಗಿ ಪರಿವರ್ತಿಸಲಾಗಿದೆ. ಮಲಗಲು ಎರಡು ಬೆಡ್‌ರೂಮ್‌ಗಳು, ಲಿವಿಂಗ್‌ ಏರಿಯಾ, ಎ ಕ್ಲಾಸ್ ವಾಶ್‌ರೂಮ್‌ಗಳು ಮತ್ತು ಎಲ್ಲವೂ ಐಷಾರಾಮಿ. ಟಿವಿ, ಡಿವಿಡಿ ಪ್ಲೇಯರ್, ವೈ-ಫೈ ಇಂಟರ್ನೆಟ್ ಮತ್ತು ನಿಮ್ಮ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳನ್ನು ಈ ರೈಲ್‌ನಲ್ಲಿ ಪ್ರಯಾಣಿಸುವಾಗ ಆನಂದಿಸಬಹುದು.

ಈ ರೈಲಿನ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕುಶಾಗ್ರಾ ಎಂಬ ನೆಟಿಜನ್, ‘ಭಾರತೀಯ ರೈಲ್ವೆಯ ಅತ್ಯಂತ ದುಬಾರಿ ಟಿಕೆಟ್ ಈ ಕೋಚ್ ಅನ್ನು ನೀವು ಎಂದಾದರೂ ನೋಡಿದ್ದೀರಾ?’ ಈ ರೈಲಿನ ಟಿಕೆಟ್ ದರ ರೂ. 19 ಲಕ್ಷಕ್ಕಿಂತ ಹೆಚ್ಚು ಎಂದು ಬರೆದುಕೊಂಡಿದ್ದಾರೆ. ಈ ಐಷಾರಾಮಿ ರೈಲು ಪ್ರಯಾಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೇಕೆ ತಡ..ನೀವೂ ಈ ಐಷಾರಾಮಿ ರೈಲನ್ನು ಒಮ್ಮೆ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!