ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎದುರು ಸಿಕ್ಕವರಿಗೆ ಅಚ್ಚರಿ ಮೂಡಿಸುತ್ತೆ ಮಾಜಿ ಪೈಲೆಟ್’ನ ಈ ರೈತ ಸ್ನೇಹಿ ಬಿದಿರು ಸೈಕಲ್!

  • ಕಾವ್ಯಾ ಜಕ್ಕೊಳ್ಳಿ

ಇವರು ಬೈಕ್, ಕಾರ್ ಬಿಟ್ಟು ಸೈಕಲ್ ಸವಾರಿ ಹೊರಟರೆ ಸಾಕು, ರಸ್ತೆಯುದ್ದಕ್ಕೂ ಹಾಲುಗಲ್ಲದ ಮಕ್ಕಳಿಂದ ಹಿಡಿದು ಹಣ್ಣು ವೃದ್ಧರವರೆಗೂ ಕುತೂಹಲದಿಂದ ಅವರನ್ನೇ ದಿಟ್ಟಿಸುತ್ತಾರೆ. ಗುರುತು ಪರಿಚಯವಿಲ್ಲದವರೂ ಕೂಡ ಹತ್ತಿರಕ್ಕೆ ಬಂದು ಮಾತನಾಡಿಸುತ್ತಾರೆ. ಕೆಲವರಂತೂ ಅವರೊಟ್ಟಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಯಾಕೆ ಈ ವ್ಯಕ್ತಿ ಇಷ್ಟೊಂದು ಸ್ಪೆಷಲ್ ಗೊತ್ತಾ? ಈ ವ್ಯಕ್ತಿ ಸ್ಪೆಷಲ್ ಅಲ್ಲ. ಇವರು ನಮ್ಮಂತೆಯೇ ಸಾದಾಸೀದಾನೆ. ಆದರೆ ಅವರ ಬಳಿ ಇರುವ ಸೈಕಲ್ ಭಾರಿ ಸ್ಪೆಷಲ್. ಏಕೆಂದರೆ ಇದು ಬಿದರಿನ ಸೈಕಲ್

ವಾಟ್! ಬಿದಿರಿನ ಮೇಜು, ಚೇರ್, ಟೇಬಲ್ ತಯಾರಿಸುವುದು ಕೇಳಿದ್ದೇವೆ. ಇದೇನಿದು ಬಿದಿರಿನಿಂದ ಸೈಕಲ್ಲಾ ಅನ್ಕೋತಿದಿರಾ? ಹೌದು ಕಣ್ರಿ.. ಬಿದರಿನಿಂದಲೂ ಸೈಕಲ್ ತಯಾರಿಸಬಹುದು ಎಂಬುದನ್ನು ಭಾರತೀಯ ವಾಯುದಳದ ಮಾಜಿ ಪೈಲೆಟ್ ಶಶಿಶೇಖರ್ ಪಾಠಕ್ ತೋರಿಸಿದ್ದಾರೆ. ಈ ಸೈಕಲ್ ಮತ್ತೂ ಸ್ಪೆಷಲ್ ಯಾಕೆಂದ್ರೆ ಇದನ್ನು ಕರ್ಚೀಫ್ ರೀತಿ ಮಡಿಚಿಡಬಹುದು. ಬಟ್ ಜೇಬಲ್ಲಿ ಇಟ್ಕೊಳೋದಕ್ಕೆ ಆಗೋದಿಲ್ಲ.

ಮಹಾರಾಷ್ಟ್ರ ಮೂಲದ ಶಶಿಶೇಖರ್ ಪಾಠಕ್ ಕಳೆದ 5 ವರ್ಷಗಳಿಂದ ಬಿದಿರಿನ ಸೈಕಲ್ ತಯಾರಿಸುತ್ತಿದ್ದಾರೆ. ಇವರಿಗೆ ಹೆಗಲಾಗಿ ನಿಂತು ಸಹಾಯ ಮಾಡುತ್ತಿರುವವರು ಪಾಠಕ್ ಪತ್ನಿ ದೇವಿಕಾ. ಈ ದಂಪತಿ ತಮ್ಮ ಕನಸಿನ ಉದ್ದಿಮೆಗೆ ಇಟ್ಟ ಹೆಸರು ‘ಬಾಂಬೂಚಿ’

ಕನಸಿನ ಕೂಸು ಚಿಗುರೊಡೆದಿದ್ದು ಹೀಗೆ…

ಮಹಾರಾಷ್ಟ್ರದ ಪುಣೆಯಿಂದ 60 ಕೀ.ಮೀ. ದೂರದಲ್ಲಿರುವ ಭೋರ್ ಗ್ರಾಮದಲ್ಲಿ ಪಾಠಕ್ ಸಣ್ಣ ಜಮೀನು ಖರೀದಿಸುತ್ತಾರೆ. ಅಲ್ಲಿದ್ದಿದ್ದು ಗಗನದೆತ್ತರಕ್ಕೆ  ಚಾಚಿಕೊಂಡಿರುವ ಬಿದಿರುಗಳು. ಈ ಬಿದಿರನ್ನು ಸರಿಯಾಗಿ ಬಳಸಿಕೊಳ್ಳಲು ಪಾಠಕ್ ದಂಪತಿ ನಿರ್ಧರಿಸುತ್ತಾರೆ. ಆದರೆ ಹೇಗೆ ಹೊಸ ರೀತಿಯಲ್ಲಿ ಬಳಸುವುದು? ಬಿದಿರಿನಿಂದ ಈಗಾಗಲೇ ಕುರ್ಚಿ, ಮೇಜು, ಟೇಬಲ್, ಕಂಬಗಳನ್ನು ತಯಾರಿಸುವ ಹಲವಾರು ಘಟಕ ಇದೆ. ನಾವು ಏನಾದರೂ ಹೊಸದಾಗಿ ತಯಾರಿಸೋಣ ಎಂದು ನಿರ್ಧರಿಸಿದ  ದಂಪತಿ 2 ವರ್ಷ ಖಾಲಿ ಕುಳಿತುಕೊಳ್ಳುತ್ತಾರೆ.

ಅದೊಂದು ದಿನ ಟಿವಿಯಲ್ಲಿ ನೋಡುತ್ತಿದ್ದಾಗ ಅಲ್ಲಿ ಬಿದಿರಿನಿಂದ ತಯಾರಿಸಿದ ಸೈಕಲ್ ಕಾಣಿಸಿತು. ತಕ್ಷಣ ಪಾಠಕ್ ದಂಪತಿ ನಿರ್ಧರಿಸಿದರು ‘ಇದೇ ನಮ್ಮ ಮುಂದಿನ ಯೋಜನೆ’.

ನಮಗೆ ಯಾವುದೇ ಅನುಭವವಿರಲಿಲ್ಲ…

‘ಸೈಕಲ್ ತಯಾರಿಸುವ ಬಗ್ಗೆ ನಮಗೆ ಯಾವುದೇ ಅನುಭವವಿರಲಿಲ್ಲ. ಸುಮಾರು ಎರಡು ವರ್ಷ ಒಂದು ಸೈಕಲ್ ಚಕ್ರ ತಯಾರಿಸಲು ಸಮಯ ತೆಗೆದುಕೊಂಡಿದ್ದೇವೆ. ಆಗ ನಮಗೆ ಸಹಾಯಕ್ಕೆ ನಿಂತಿದ್ದು, ಎಂಜಿನಿಯರಿಂಗ್ ಸ್ನೇಹಿತರು ಮತ್ತು ಅಂರ್ತಜಾಲ. ಬಿದಿರು ಕೇವಲ ಸೈಕಲ್‌ನ ಒಂದು ಭಾಗ ಮಾತ್ರ. ಗೇರ್, ಬ್ರೇಕ್, ಚಕ್ರ ಸೀಟ್ ಹಾಗೂ ಇತರೆ ಭಾಗಗಳನ್ನು ತಯಾರಿಸುವುದೇ ಒಂದು ಸವಾಲಾಗಿತ್ತು. ಈ ಎಲ್ಲಾ ಬಿಡಿ ಭಾಗಗಳನ್ನು ಬೇರೆ ಉತ್ಪಾದಕರಿಂದ ಖರೀದಿಸಲು ನಿರ್ಧರಿಸಿದೆವು’ ಎನ್ನುತ್ತಾರೆ ಶಶಿಶೇಖರ್ ಪಾಠಕ್.

ನಮ್ಮ ಕನಸಿನ ಬೈಸಿಕಲ್ ರೈತರ ಬಾಳಿಗೆ ಬೆಳಕಾಗಬಹುದು…

ಪಾಠಕ್ ಆಗಾಗ ತನ್ನ ಜಮೀನಿಗೆ ಹೋಗುತ್ತಿರುವಾಗ ದಾರಿ ಮಧ್ಯೆ ಎದುರಾಗುವ ಅಲ್ಲಿನ ರೈತರು ತಮಗೆ ಪುಣೆ ಅಥವಾ ಮುಂಬೈನಲ್ಲಿ ಏನಾದರೂ ಕೆಲಸ ಕೊಡಿಸಿ ಎನ್ನುತ್ತಿದ್ದರು. ಏಕೆಂದರೆ ಅಲ್ಲಿಯ ಬೆಳೆ ಭತ್ತ. ವರ್ಷದ ಐದು ತಿಂಗಳು ರೈತರು ಭತ್ತ ಕೆಲಸ ಮಾಡುತ್ತಿದ್ದರು. ಉಳಿದ 7 ತಿಂಗಳು ಖಾಲಿ ಇರುತ್ತಿದ್ದರ. ಆಗ ಪಾಠಕ್ ಒಂದು ನಿರ್ಧಾರಕ್ಕೆ ಬಂದರು. ಸೈಕಲ್ ತಯಾರಿಸಲು ರೈತರಿಂದ ಬಿದಿರನ್ನು ಖರೀದಿ ಮಾಡುವುದು.

‘ನೀವು ನನಗೆ ಬೇಕಾದ ಉತ್ತಮ ಮಟ್ಟದ ಬಿದಿರು ಬೆಳೆ ಕೊಟ್ಟರೆ ಅದನ್ನು ಉತ್ತಮ ಬೆಲೆಗೆ ಕೊಂಡುಕೊಳ್ಳುವುದಾಗಿ’ ರೈತರಿಗೆ ಪಾಠಕ್ ಹೇಳಿದರು. 7 ತಿಂಗಳು ಖಾಲಿ ಇರುವ ರೈತರಿಗು ಕಸುಬು ಆಯ್ತು.

ಒಂದು ವರ್ಷಕ್ಕೆ ರೆಡಿಯಾಯ್ತು ಬಿದಿರಿನ ಕುದುರೆ..

ಅಂತೂ-ಇಂತೂ ಒಂದು ಸೈಕಲ್ ರೆಡಿ ಆಯ್ತು.  ಈ ಒಂದು ಸೈಕಲ್ ತಯಾರಾಗಲು ಬರೋಬ್ಬರಿ ಒಂದು ವರ್ಷ ತಗುಲಿತು. ಆದರೆ ಈ ಸೈಕಲ್‌ಗೆ ವೇಗದ ಮಿತಿ ಇತ್ತು ಮತ್ತು ಹಿಂದಿನ ಚಕ್ರಕ್ಕೆ ಬ್ರೇಕ್ ಇರಲಿಲ್ಲ. ಮತ್ತೆ ಮೂರೇ ತಿಂಗಳಲ್ಲಿ ಮತ್ತೊಂದು ಸೈಕಲ್ ರೆಡಿ ಆಯ್ತು. ಈ ಸೈಕಲ್‌ನಲ್ಲಿ ಯಾವುದೇ ಕೊರತೆ ಇರಲಿಲ್ಲ. ಮರಕಟ್ಟೆಯಲ್ಲಿ ಸಿಗುವ ಸೈಕಲ್‌ಗೆ ಸರಿಸಮವಾಗಿತ್ತು. ಪಾಠಕ್ ದಂಪತಿಯ ಶ್ರಮದ ಫಲ ಕಣ್ಣೆದುರು ನಿಂತಿತ್ತು.

ಗ್ರಾಹಕರಿಗೆ ಹೇಗೆ ಬೇಕೋ ಹಾಗೆ..

ಗ್ರಾಹಕರಿಗೆ ಹೇಗೆ ಬೇಕೋ ಹಾಗೆಯೇ ಪಾಠಕ್ ಸೈಕಲ್ ತಯಾರಿಸಿಕೊಡುತ್ತಾರೆ. ನಿಮ್ಮ ಎತ್ತರ ಅಳತೆ ತೆಗೆದುಕೊಳ್ಳುತ್ತಾರೆ. ನಿಮಗೆ ಸರಿ ಹೊಂದುವ ಅಳತೆಯ ಸೈಕಲ್‌ನ್ನೇ ರೆಡಿ ಮಾಡಿಕೊಡುತ್ತಾರೆ. ಆದರೆ ಹೋದ ತಕ್ಷಣ ಸೈಕಲ್ ಸಿಗುವುದಿಲ್ಲ. ಎರಡು ತಿಂಗಳ ಮೊದಲು ಅಳತೆ ಕೊಟ್ಟು, ನೀವು ಸೈಕಲ್ ರೈಡ್ ಮಾಡಬಯಸುವ ಪ್ರದೇಶದ ಕುರಿತು ಹೇಳಬೇಕು. ನಿಮಗೆ ಸರಿ ಹೊಂದುವ ಸೈಕಲ್ ರೆಡಿ ಮಾಡುತ್ತಾರೆ. ಅಷ್ಟೇ ಅಲ್ಲ ಬೆನ್ನು ನೋವು, ಕೈ, ಕಾಲು ನೋವಿರುವಂತಹ ವಿಶೇಷ ಗ್ರಾಹಕರಿಗೆ ವಿಶೇಷ ರೀತಿಯಲ್ಲೇ ಸೈಕಲ್ ಸಿದ್ಧಪಡಿಸಿಕೊಡುತ್ತಾರೆ.

ಗುಣಮಟ್ಟದಲ್ಲೂ 100ಕ್ಕೆ100 ಅಂಕ…

ಬಿದಿರಿನ ಸೈಕಲ್ ಗುಣಮಟ್ಟದಲ್ಲಿ ಯಾವುದೇ ಕಳಪೆ ಇಲ್ಲ. ಬಿದಿರಿನ ಅತ್ಯುತ್ತಮ ಗುಣಮಟ್ಟದ ಭಾಗಗಳಿಂದಲೇ ಸೈಕಲ್ ತಯಾರಿಸುತ್ತೇವೆ. ದೀಪಾವಳಿ ನಂತರ ಬಿದಿರು ಕಡಿದು ಮೂರು ವಾರದವರೆಗೆ ಒಣಗಿಸುತ್ತೇವೆ. ನಂತರ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೈಕಲ್ ತಯಾರಿಕೆಗೆ ಸರಿಹೊಂದುವ ಬಿದಿರನ್ನು ಆಯ್ಕೆ ಮಾಡುತ್ತೇವೆ ಎನ್ನುತ್ತಾರೆ ಪಾಠಕ್.

Maharashtra Couple Makes Foldable Bamboo Cycles, Built to Your Height & Body Type

ವಿದೇಶದಲ್ಲೂ ಸುತ್ತಾಡುವ ಭಾಗ್ಯ:

ಪಾಠಕ್ ತಯಾರಿಸಿದ ಸೈಕಲ್ ವಿದೇಶಗಳಿಗೂ ರಪ್ತಾಗಿದೆ. ಇದುವರೆಗೂ ಯಾರಿಂದಲೂ ಋಣಾತ್ಮಕ ಕಮೆಂಟ್ ಬರಲಿಲ್ಲ. ಸಿಂಗಲ್ ಸ್ಪೀಡಿನ ಬಿದಿರಿನ ಸೈಕಲ್ ಬೆಲೆ 1.05 ಲಕ್ಷ ರೂ. ಟಾನ್ ಡೆಮ್ ಬಿದಿರಿನ ಸೈಕಲ್ ಬೆಲೆ 2.05 ಲಕ್ಷ ರೂ.

ಪ್ರತಿ ವ್ಯಕ್ತಿಯಲ್ಲಿಯೂ ನ್ಯೂಟನ್ ಇರುತ್ತಾನೆ. ಆದರೆ ಕಳ್ಳನಂತೆ ನಮ್ಮಲ್ಲೇ ಎಲ್ಲೋ ಅಡಗಿ ಕುಳಿತಿರುವ ನ್ಯೂಟನ್ ನನ್ನು ನಾವೇ ಹುಡುಕಬೇಕು. ಆಗ ಕಣ್ಣೆದುರು ಕಾಣುವ ಸಾಮಾನ್ಯ ವಸ್ತುವಲ್ಲೂ ಹೊಸತನ ಹುಡುಕಬಹುದು. ಇದಕ್ಕೆ ಸಾಕ್ಷಿ ನಾವೆಲ್ಲ ಉರುವಲಿಗೆ ಬಳಸುವ ಬಿದಿರಿನಲ್ಲಿ ಸೈಕಲ್ ತಯಾರಿಸಿ ಸೈ ಎನಿಸಿಕೊಂಡ ಪಾಠಕ್ ದಂಪತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss