ರಾತ್ರಿಗಸ್ತು ತಿರುಗುತ್ತಿದ್ದ ಪೇದೆಗೆ ಕಚ್ಚಿದ ವ್ಯಕ್ತಿ ಸೆರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಕಚ್ಚಿ ಗಾಯಗೊಳಿಸಿದ್ದ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ಪೊಲೀಸ್ ತಂಡವೊಂದು ನಗರದ ನೌಪಾದಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ತಂಡಕ್ಕೆ 12.30 ರ ಸುಮಾರಿಗೆ ಮನೆಯೊಂದರಲ್ಲಿ ಜೋರಾಗಿ ಸಂಗೀತ ಹಾಕಿರುವುದು ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ತನಿಖೆ ಮಾಡಲು ಹೋದಾಗ
ಅಮೀರ್ ಸಾಹಿದ್ ಖಾನ್ ಎಂಬ ವ್ಯಕ್ತಿ ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜೊತೆಗೆ ಪೊಲೀಸ್ ಜೀಪಿನ ಬಳಿಗೆ ಹೋಗಿ ವಿಂಡ್‌ಸ್ಕ್ರೀನ್‌ಗೆ ತಲೆ ಬಡಿದುಕೊಂಡು ಹಾನಿಗೊಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಬ್ಬ ಕಾನ್‌ಸ್ಟೆಬಲ್ ಅವವನ್ನು ನಿಯಂತ್ರಿಸಲು ಮುಂದಾದಾಗ, ಆರೋಪಿ ಅವರ ಬೆರಳನ್ನು ಕಚ್ಚಿದ್ದಾನೆ. ಮತ್ತು ಇತರ ಪೊಲೀಸರನ್ನು ತಳ್ಳಿದ್ದಾನೆ ಎಂದು ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!