Sunday, August 14, 2022

Latest Posts

ಮಹಾಶಿವರಾತ್ರಿ: ಶಿವನ ಲಿಂಗಕ್ಕೆ ನೆರವೇರಿತು ರುದ್ರಾಭಿಷೇಕ, ಬಿಲ್ವಾರ್ಚನೆ

ಹೊಸದಿಗಂತ ವರದಿ, ಕಲಬುರಗಿ:

ನಗರದ ವಿವಿಧ ಬಡಾವಣೆಗಳಲ್ಲಿ ಮಹಾ ಶಿವರಾತ್ರಿಯ ಹಬ್ಬದ ಅಂಗವಾಗಿ ಶಿವನ ಲಿಂಗಕ್ಕೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಬ್ರಹ್ಮಪೂರ ಬಡಾವಣೆಯಲ್ಲಿ ಈಶ್ವರ ತರುಣ ಸಂಘದ ವತಿಯಿಂದ ಶಿವನ ಮಂದಿರದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿದರು.

ರುದ್ರಾಭಿಷೇಕ ಪೂಜೆಯ ನಂತರ ತರುಣ ಸಂಘದ ಅಧ್ಯಕ್ಷ ಸಿದ್ದು ಪಡಶೆಟ್ಟಿ ಮಾತನಾಡಿ, ಪ್ರತಿ ವಷ೯ದಂತೆ ಈ ವಷ೯ವೂ ಸಹ ನಗರದಲ್ಲಿ ಶಿವನ ಲಿಂಗಕ್ಕೆ ವಿಶೇಷ ಪೂಜೆಗ಼ಳು ನಡೆದಿವೆ. ಕಳೆದ ಎರಡು ವಷ೯ದಿಂದ ಕೋವಿಡ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಸಿ ಭಕ್ತಾದಿಗಳಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸಾವಿರ ಜನರಿಗೆ ಮಹಾ ಪ್ರಸಾದ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬಂದಂತಹ ಭಕ್ತಾದಿಗಳಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಗಭ೯ ಗುಡಿಯ ಪ್ರವೆಶಕ್ಕೂ ಮುನ್ನ ಮಾಸ್ಕ್ ,ಹಾಗೂ ಸ್ಯಾನಿಟೈಜರ್ ಸಿಂಪಡಿಸಿ ಒಳಗೆ ಬಿಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಣ್ಮುಖ ಚಿನ್ನಮಳ್ಳಿ, ಶೇಖಣ್ಣಾ ಪಸಾರ್,ಬಾಬುರಾವ್ ಕುಲಕರ್ಣಿ, ಕಾಶಿನಾಥ್, ಜೀತೇಂದ್ರ, ಶಿವು ಸೇರಿಕಾರ, ಶರಣು, ಸಂತೋಷ ಸೇರಿದಂತೆ ತರುಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss