ಮಹಾಶಿವರಾತ್ರಿ.. ಇಂದು ಏನು ತಿನ್ನಬೇಕು? ಏನು ತಿನ್ನಬಾರದು?

ಮಹಾಶಿವರಾತ್ರಿ ದಿನದಂದು ಉಪವಾಸ ಹಾಗೂ ಜಾಗರಣೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಹಿಂದೂ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು, ರಾತ್ರಿಯಿಡೀ ಕುಳಿತು ಶಿವನ ಭಜನೆ ಮಾಡುವುದು ಹಬ್ಬದ ಪ್ರತೀತಿ.. ಈ ಹಬ್ಬದ ಉಪವಾಸ ಹೇಗಿರಬೇಕು?

  • ಶ್ರದ್ಧಾ ಭಕ್ತಿಯಿಂದ ಕೂಡಿದ ಉಪವಾಸ ಇದಾಗಿರಲಿದ್ದು, ನೀರು ಮಾತ್ರ ಕುಡಿದು ಉಪವಾಸ ಮಾಡುವವರಿದ್ದಾರೆ, ನೀರನ್ನೂ ಕುಡಿಯದೆ ಉಪವಾಸ ಮಾಡುವವರೂ ಇದ್ದಾರೆ. ಆದರೆ ಇದರಿಂದ ಆರೋಗ್ಯಕ್ಕೆ ಅನಾನುಕೂಲ ಹೆಚ್ಚು.
  • ಕೆಲವರು ದೇವರಿಗೆ ಮಾಡಿದ ಪ್ರಸಾದವನ್ನು ಲಘು ಉಪಹಾರವನ್ನಾಗಿ ಸೇವಿಸುತ್ತಾರೆ. ಇನ್ನು ಹಲವರು ಬರೀ ಹಣ್ಣು ಹಂಪಲುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡುತ್ತಾರೆ.
  • ಧಾನ್ಯ ಹಾಗೂ ಕಾಳುಗಳನ್ನು ಬಳಸಿದ ಯಾವುದೇ ಆಹಾರವನ್ನು ಇಂದು ಸೇವಿಸುವಂತಿಲ್ಲ. ಆಲೂಗಡ್ಡೆ ಬಳಸಿ ಮಾಡುವ ಅಡುಗೆಗೆ ನಿರ್ಬಂಧ ಇಲ್ಲ.
  • ಅನ್ನ ಬಿಟ್ಟು ಬೇರೆ ಎಲ್ಲವನ್ನು ತಿನ್ನುವವರೂ ಇದ್ದಾರೆ, ಉಪ್ಪಿಟ್ಟು, ಚಪಾತಿ, ಪಾಯಸ ಸೇವಿಸಿ ಉಪವಾಸ ಮುಗಿಸುತ್ತಾರೆ.
  • ಹಾಲಿನಿಂದ ಮಾಡಿದ ಸಿಹಿತಿನಿಸುಗಳನ್ನು ಸೇವಿಸಬಹುದು, ಇದಕ್ಕೆ ಯಾವುದೇ ನಿರ್ಬಂಧ ಇಲ್ಲ.
  • ಬಾದಾಮಿ ಹಾಲು, ಹಾಲಿನ ಪಾಯಸ, ಸಬ್ಬಕ್ಕಿ ಖೀರು ಸೇವಿಸಬಹುದು
  • ಎಲ್ಲ ಮಸಾಲಾ ಪದಾರ್ಥಗಳನ್ನು ಸೇವಿಸಬಹುದು ಆದರೆ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿ ಸೇವನೆ ಮಾಡುವಂತಿಲ್ಲ.
  • ಎಲ್ಲ ರೀತಿಯ ಹಣ್ಣು ಹಾಗೂ ಡ್ರೈ ಫ್ರೂಟ್ಸ್‌ಗಳ ಸೇವನೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!