ವಿಶ್ವಸಂಸ್ಥೆಯಲ್ಲಿ ತಲೆ ಎತ್ತಲಿದೆ ಮಹಾತ್ಮಾ ಗಾಂಧಿ ಪ್ರತಿಮೆ: ಡಿ. 14 ರಂದು ಅನಾವರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿಸೆಂಬರ್ 14ರಂದು ವಿಶ್ವಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಉದ್ಘಾಟಿಸಲಿದ್ದಾರೆ.

ಈ ಮೂಲಕ ಭಾರತದ ಅಧ್ಯಕ್ಷತೆಯ ಸಮಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಮಹಾತ್ಮ ಗಾಂಧಿ ಪ್ರತಿಮೆ ತಲೆ ಎತ್ತಲಿದೆ.
ಭಾರತ ಗುರುವಾರ ಭದ್ರತಾ ಮಂಡಳಿಯಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡಿದೆ, ಇದು ಆಗಸ್ಟ್ 2021ರ ನಂತ್ರ ಎರಡನೇ ಬಾರಿಗೆ ಚುನಾಯಿತ ಯುಎನ್‌ಎಸ್ಸಿ ಸದಸ್ಯ ರಾಷ್ಟ್ರವಾಗಿ ತನ್ನ ಎರಡು ವರ್ಷಗಳ ಅವಧಿಯಲ್ಲಿ ಕೌನ್ಸಿಲ್’ನ ಅಧ್ಯಕ್ಷತೆಯನ್ನ ವಹಿಸುತ್ತಿದೆ.

ವಿಶ್ವಸಂಸ್ಥೆಯ ಕಟ್ಟಡದ ‘ಅಪ್ರತಿಮ’ ನಾರ್ತ್ ಲ್ಯಾನ್’ನಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನ ಇರಿಸಲಾಗುವುದು, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಎಚ್ ಕ್ಯೂನಲ್ಲಿ ಮಹಾತ್ಮರ ಪ್ರತಿಮೆಯನ್ನ ಸ್ಥಾಪಿಸಲಾಗುವುದು.

ಈಕ್ವೆಡಾರ್, ಜಪಾನ್, ಮಾಲ್ಟಾ, ಮೊಜಾಂಬಿಕ್ ಮತ್ತು ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಮುಂಬರುವ ಐದು ಹೊಸ ಕೌನ್ಸಿಲ್ ಸದಸ್ಯ ರಾಷ್ಟ್ರಗಳು ಸೇರಿದಂತೆ ಯುಎನ್‌ಎಸ್ಸಿ ಸದಸ್ಯರ ಉಪಸ್ಥಿತಿಯಲ್ಲಿ ಈ ಸರಳ ಸಮಾರಂಭ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!